ನಿರ್ಭಯಾ ಗ್ಯಾಂಪ್ ರೇಪ್ ಕೊಲೆ ಕೇಸ್: ಅಪರಾಧಿ ಪವನ್ ಗುಪ್ತ ಕ್ಷಮದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ..

ನವದೆಹಲಿ,ಮಾ,2,2020(www.justkannada.in):  ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಪ್ರಯತ್ನವಾಗಿ ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮದಾನ ಅರ್ಜಿಯನ್ನ ರಾಷ್ಟ್ರಪತಿ ರಮನಾಥ್ ಗೋವಿಂದ್ ತಿರಸ್ಕರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ತಡೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನ  ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ತಿರಸ್ಕರಿಸಿತ್ತು. ಜತೆಗೆ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾ ಆಗಿತ್ತು. ನಂತರ ಕೊನೆಯ ಪ್ರಯತ್ನವಾಗಿ ಪವನ್ ಗುಪ್ತ ಕ್ಷಮದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ.

ಆದರೆ ಕೊನೆಯ ಪ್ರಯತ್ನವೂ ವಿಫಲವಾಗಿದ್ದು ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ರಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ. ಹೀಗಾಗಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಫಿಕ್ಸ್ ಆಗಿದೆ. ಅಪರಾಧಿಗಳನ್ನ ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಗಲ್ಲು ಶಿಕ್ಷೆಯ ಎಲ್ಲಾ ತಯಾರಿಗಳು ಮುಗಿದಿವೆ ಎಂದು ತಿಹಾರ್ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Key words: Nirbhaya Gang Rape -Murder Case-Pavan Gupta-petition- refuses