ತಾಕತ್ತಿದ್ದರೇ ಪಾಕಿಸ್ತಾನದಲ್ಲಿ ನಿಂತು ಭಾರತಕ್ಕೆ ಜೈ ಎಂದು ಬರಲಿ-ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲು…

ಬೆಂಗಳೂರು.ಮಾ,2,2020(www.justkannada.in): ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ತಾಕತ್ತಿದ್ದರೇ ಪಾಕಿಸ್ತಾನದಲ್ಲಿ ನಿಂತು ಭಾರತಕ್ಕೆ ಜೈ ಎಂದು ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ಸಮರ್ಥಿಸಿಕೊಂಡ  ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಪಾಕ್ ಗೆ ಜೈ ಎಂದವರಿಗೆ ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಿದರೇ ತಪ್ಪಿಲ್ಲ. ಪಾಕ್ ಗೆ ಜೈ ಎಂದರೇ ಸುಮ್ಮನೇ ಇರಬೇಕಾ…? ದೇಶದ್ರೋಹಿಗಳು ಪಾಕಿಸ್ತಾನದ ಭಾರತಕ್ಕೆ ಜೈ ಎಂದು ಜೀವಸಹಿತ ಬರಲಿ ಎಂದು ಚಾಲೆಂಜ್ ಹಾಕಿದರು.

ಹಾಗೆಯೇ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ದೊರೆಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದೆ. ಮಾತನಾಡಬೇಕಾದರೆ ಅವರು ಯೋಚನೆ ಮಾಡಿ ಮಾತನಾಡಲಿ ಎಂದು ಟಾಂಗ್ ನೀಡಿದರು.

Key words: Pakistan –barath jai-challenge- MLA-MP Renukacharya