Monday, October 12, 2026

Dasara Wishes

ನಟ ದರ್ಶನ್ ಗೆ ಜೈಲೇ ಗತಿ: ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ DasraWishes_JK DasraWishes JK
Happy Dasara
Home Front Page BBMP ಹೆಸರು ಬದಲಿಸಿ GBA ಮಾಡಿದ್ದೇ ಕಾಂಗ್ರೆಸ್ ಸಾಧನೆ- ನಿಖಿಲ್ ಕುಮಾರಸ್ವಾಮಿ ಕಿಡಿ

BBMP ಹೆಸರು ಬದಲಿಸಿ GBA ಮಾಡಿದ್ದೇ ಕಾಂಗ್ರೆಸ್ ಸಾಧನೆ- ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು,ಏಪ್ರಿಲ್,11,2026 (www.justkannada.in):  ಬಿಬಿಎಂಪಿ ಹೆಸರು ಬದಲಿಸಿ ಜಿಬಿಎ ಮಾಡಿದ್ದೇ ಕಾಂಗ್ರೆಸ್ ಸಾಧನೆ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಇಂದು ಬೆಂಗಳೂರು ಕೊಮ್ಮಘಟ್ಟದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದ್ದು ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮೆಟ್ರೋ ಶಂಕು ಸ್ಥಾಪೆ ಮಾಡಿದ್ದೇ ಹೆಚ್ ಡಿ ಕುಮಾರಸ್ವಾಮಿ. ಬೆಂಗಳೂರು ನಗರದಲ್ಲಿ  ಟ್ರಾಫಿಕ್  ಸಮಸ್ಯೆ ಹೆಚ್ಚಾಗಿದೆ ಫ್ಲೈಓವರ್ ಕಾನ್ಸಪ್ಟ್ ತಂದಿದ್ದು ಹೆಚ್ ಡಿ ದೇವೇಗೌಡರು ಕಾವೇರಿ 4ನೇ ಹಂತದ ಯೋಜನೆ ತಂದಿದ್ದು ಸಹ ದೇವೇಗೌಡರು. ಹೆಚ್ ಡಿಡಿ ಅವರು ಯಾರೂ ಅಳಿಸಲಾಗದಷ್ಟು ಕೊಡಗೆ ನೀಡಿದ್ದಾರೆ ಎಂದರು.

ಹೆಚ್ ಡಿ ಕುಮಾರಸ್ವಾಮಿ ಬಿಬಿಎಂಪಿ ರಚಿಸಿದ್ರು. ಈಗ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ದಿ ಕೆಲಸಗಳು ಕುಸಿದಿವೆ ಬಿಬಿಎಂಪಿ ಹೆಸರು ಬದಲಿಸಿ ಜಿಬಿಎ ಮಾಡಿದ್ದೇ ಇವರ ಸಾಧನೆ. ಜಿ ಎಂದರೆ ಗಾರ್ಬೇಜ್ ಬಿ ಎಂದರೇ ಬ್ಯಾಡ್ ರೋಡ್  ಎ ಎಂದರೇ ಎ ಖಾತೆ ಸ್ಕ್ಯಾಮ್ ಇದು  ಜಿಬಿಎ ಎಂದು ಟೀಕಿಸಿದರು.

Key words:  Changing, BBMP, name , GBA,Congress, achievement, Nikhil Kumaraswamy