ಬೆಂಗಳೂರು,ಮಾರ್ಚ್,07,2021(www.justkannada.in) : ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಕಾರೊಂದು ಉರುಳಿ ಬಿದ್ದಿದ್ದು, ಚಾಲಕ ಪವನ್ಕುಮಾರ್ ಜೈನ್ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಿ.ದಾಸರಹಳ್ಳಿ ನಿವಾಸಿ ಪವನ್ಕುಮಾರ್, ತಮ್ಮ ಪತ್ನಿ ಪುಷ್ಪಾ (40), ಮಗ ವಿನೀತ್ (23) ಹಾಗೂ ಮಗಳು ವರ್ಷಾ (18) ಜೊತೆ ಕೃ಼ಷ್ಣಗಿರಿಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಕೃಷ್ಣಗಿರಿಯ ಜೈನ್ ಮಂದಿರಕ್ಕೆ ಹೋಗುವುದಕ್ಕಾಗಿ ಕುಟುಂಬ ಭಾನುವಾರ ಬೆಳಿಗ್ಗೆ ಮನೆಯಿಂದ ಕಾರಿನಲ್ಲಿ ತೆರಳುತ್ತಿತ್ತು. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಲಾಗಿತ್ತು. ಹೀಗಾಗಿ, ಕಾರು ಉರುಳಿ ಬಿದ್ದಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘ಅವಘಡದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಪುಷ್ಪಾ, ವಿನಿತ್ ಹಾಗೂ ವರ್ಷಾ ಅವರಿಗೂ ಗಾಯವಾಗಿದೆ. ಅವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ತಿಳಿಸಿದರು.
key words : nice road-Car overturn-driver-death






