ನಾಳೆ ಮೈಸೂರು ವಿವಿಯ ಸಂಸ್ಥಾಪನಾ ದಿನದ ಉಪನ್ಯಾಸ ಕಾರ್ಯಕ್ರಮ.

Promotion

ಮೈಸೂರು,ಜುಲೈ,26,2021(www.justkannada.in):  ಮೈಸೂರು ವಿಶ್ವವಿದ್ಯಾನಿಲಯವು ‘ನಮ್ಮ ಶಿಕ್ಷಣ ಪದ್ದತಿ ನಮಗೆ ಕಲಿಸದ ಆದರೆ ಬದುಕಿಗೆ ಇದು ಅತ್ಯಗತ್ಯವಾಗಿ ಬೇಕಾದ ಸಂಗತಿ’ ಕುರಿತು ಜುಲೈ 27 ಅಂದರೆ ನಾಳೆ ಸಂಸ್ಥಾಪನಾ ದಿನದ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಿದೆ.jk

ನಾಳೆ ಬೆಳಿಗ್ಗೆ 11.30ಕ್ಕೆ ಕ್ರಾಫರ್ಡ್ ಭವನದಲ್ಲಿ ಉಪನ್ಯಾಸ  ನಡೆಯಲಿದ್ದು, ಬೆಂಗಳೂರು ಇನ್ಫೋಸಿಸ್ ಪ್ರತಿಷ್ಟಾನದ ಸಂಸ್ಥಾಪಕರಾದ ಡಾ.ಸುಧಾಮೂರ್ತಿ ಅವರು ಆನ್ ಲೈನ್ ಮೂಲಕ ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಡಿಸಿಎಂ ಸಿ.ಎನ್ ಅಶ್ವಥ್ ನಾರಾಯಣ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ಅಧ್ಯಕ್ಷರು ಹಾಗೂ ಇಂಫಾಲ್  ಕೇಂದ್ರಿಯ ಕೃಷಿ ವಿಶ್ವ ವಿದ್ಯಾಲಯದ  ಕುಲಾಧಿಪತಿಗಳಾದ ಪ್ರೊ. ಎಸ್.  ಅಯ್ಯಪ್ಪನ್ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸುವರು. ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ವಿಶ್ವವಿದ್ಯಾನಿಲಯದ ಕಟ್ಟಡಗಳ ಹಾಗೂ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ..

ನಾಳೆ ಬೆಳಿಗ್ಗೆ 10.15ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಕಟ್ಟಡಗಳ ಹಾಗೂ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಡಿಸಿಎಂ ಡಾ.ಸಿ.ಎಸ್ ಅಶ್ವಥ್ ನಾರಾಯಣ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಲ್. ನಾಗೇಂದ್ರ, ಗೌರವಾನ್ವಿತ ಅತಿಥಿಗಳಾಗಿ ಕೇಂದ್ರಿಯ ಕೃಷಿ ವಿಶ್ವ ವಿದ್ಯಾಲಯದ  ಕುಲಾಧಿಪತಿಗಳಾದ ಪ್ರೊ. ಎಸ್.  ಅಯ್ಯಪ್ಪನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ENGLISH SUMMARY…

UoM Founday Day
Bengaluru, July 27, 2021 (www.justkannada.in): The University of Mysore has organized a Foundation Day online lecture on the topic, “What we do not learn from our Education System, but is very essential for our life,” by Founder of Infosys Foundation, Bengaluru, Dr. Sudha Murthy, on July 27, 2021, Tuesday, at 11.30 am.
The lecture is scheduled to be held at the Crawford Hall, University of Mysore, Mysuru. Dr. C.N. Ashwath Narayan, Deputy Chief Minister and Minister for Higher Education, Government of Karnataka will be the chief guest. Prof. S. Ayyappan, Chairman, Karnataka Science and Technology Academy and Chancellor, Central Agricultural University, Imphal, will be the guest of honour and Prof. G. Hemanth Kumar, Vice-Chancellor, University of Mysore will preside over the program.
Keywords: University of Mysore/ Foundation Day/ online lecture program/ Dr. Sudha Murhty

Key words: University of Mysore – organized – Foundation Day –online- lecture