Wednesday, July 29, 2026

BDA Apartments

Home Front Page ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ: ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದು ಹೀಗೆ.

ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ: ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದು ಹೀಗೆ.

ಗದಗ,ಜುಲೈ,26,2021(www.justkannada.in):  ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿರುವ ಕುರಿತು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.jk

ಈ ಬಗ್ಗೆ ಗದಗದಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಎಸ್ ಯಡಿಯೂರಪ್ಪ, ಕರ್ನಾಟಕ ಕಂಡ ಭ್ರಷ್ಟ ಸಿಎಂ ಆಗಿದ್ರು  ಈಗ ಇನ್ನೊಬ್ಬ ಸಿಎಂ ಆಗಿ ಬಂದ್ರೂ ಬ್ರಷ್ಟಾಚಾರ ಮಾಡ್ತಾರೆ.   ಬಿಎಸ್ ವೈ ರಾಜೀನಾಮೆ ಬಗ್ಗೆ 6 ತಿಂಗಳ ಮೊದಲೇ ಗೊತ್ತಿತ್ತು. ಅವರು ರಾಜೀನಾಮೆ ಕೊಟ್ಟು ಮತ್ತೊಬ್ಬರು ಸಿಎಂ ಆಗುವುದಾದ್ರೆ ಇದರಿಂದ ರಾಜ್ಯದ ಜನರಿಗೆ ಯಾವುದೇ ಒಳ್ಳೆಯದಾಗುವುದಿಲ್ಲ. ಇದರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಟೀಕಿಸಿದರು.

ಬಿಎಸ್ ವೈ ನಾಲ್ಕು ಬಾರಿ ಸಿಎಂ ಆದ್ರೂ  ಅವಧಿ ಪೂರೈಸಲಿಲ್ಲ. ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಾಮಾನ್ಯ ಜನರಿಗೆ ಏನೂ ಲಾಭವಾಗುವುದಿಲ್ಲ. ಅದರ ಬದಲು ಅಧಿಕಾರ ನಡೆಸಲು ಸಂಪೂರ್ಣ ವಿಫಲವಾಗಿರುವ ಬಿಜೆಪಿ ಪಕ್ಷವೇ ಅಧಿಕಾರ ಬಿಟ್ಟು ತೊಲಗಿದರೆ ರಾಜ್ಯದ ಜನ ನೆಮ್ಮದಿಯಿಂದ ಬದುಕಬಹುದು ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: BS Yeddyurappa- resigns – CM-Opposition leader -Siddaramaiah -criticize