ರೈತರಿಗೆ ಕಬ್ಬು ಬಿಲ್ ಬಾಕಿ ಹಿನ್ನೆಲೆ: ನಾಳೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಂದ ಸಭೆ.

ಬೆಂಗಳೂರು,ಮೇ,10,2022(www.justkannada.in): ರೈತರಿಗೆ ಕಬ್ಬು ಬಿಲ್ಲು ಬಾಕಿ ಪಾವತಿ ಉಳಿಸಿಕೊಂಡಿರುವ ಹಿನ್ನೆಲೆ ನಾಳೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಅವರು ಸಭೆ ಆಯೋಜನೆ ಮಾಡಿದ್ದು ಕಾರ್ಖಾನೆಗಳಿಗೆ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಕಾಸಸೌಧದ 3ನೇ ಮಹಡಿಯಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ವ್ಯವಸ್ಥಾಪಕ ನಿರ್ದೇಶರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಬ್ಬು ಬಿಲ್ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್  ನೀಡಲಾಗಿದೆ. ನಾಳಿನ ಸಭೆಯಲ್ಲಿ ರೈತರಿಗೆ ಬಾಕಿ ಹಣ ಪಾವತಿ ಮಾಡುವಂತೆ ಎಚ್ಚರಿಕೆ ನೀಡುವ ಸಾಧ್ಯತೆ ಇದ್ದು, ಇಲ್ಲದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಿದ್ದಾರೆ.

ಕಾರ್ಖಾನೆಗಳು ಸರ್ಕಾರದಿಂದ ಕಬ್ಬು ಅರೆಯುವ ಪರವಾನಗಿ ನವೀಕರಣ ಪಡೆಯದೇ ಹಂಗಾಮು ನಿರ್ವಹಣೆ,  ೨೦೨೨-೨೩ನೇ ಹಂಗಾಮಿಗೆ ಕಾರ್ಖಾನೆಗಳು ಕಬ್ಬು ಸರಬರಾಜು ಸಂಬಂಧ ರೈತರಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

2021-22ನೇ ಹಂಗಾಮಿನಲ್ಲಿ ರೈತರಿಗೆ 19479.71 ಕೋಟಿ ಮೊತ್ತವನ್ನ ಕಾರ್ಖಾನೆಗಳು ಪಾವತಿಸಬೇಕಿದ್ದು, ಈ ಪೈಕಿ 15/04/2022 ರ ಅಂತ್ಯಕ್ಕೆ 2389.94 ಕೋಟಿ ರೂ. ಅನ್ನು ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ.

Key words: sugarcane -bill –balance- farmers-Meeting – Minister -Shankar Patil Muneenakoppa