ರಾಜ್ಯ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣಾ ದಿನಾಂಕ ಫಿಕ್ಸ್.

ಬೆಂಗಳೂರು,ಮೇ,10,2022(www.justkannada.in):  ಜೂನ್​ 14ರಂದು ರಾಜ್ಯದ 7 ವಿಧಾನ ಪರಿಷತ್​ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಆ ಸ್ಥಾನಗಳಿಗೆ ಜೂನ್​ 3ರಂದು ಚುನವಾಣೆ ನಡೆಯಲಿದೆ.

ಈ ಕುರಿತು ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂನ್ 3 ರಂದು ಮತದಾನ ನಡೆದು ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಂಎಲ್ ಸಿಗಳಾದ ಲಕ್ಷ್ಮಣ್​ ಸವದಿ, ರಾಮಪ್ಪ ತಿಮ್ಮಾಪುರ್​, ಅಲ್ಲಂ ವೀರಭದ್ರಪ್ಪ, ಎಚ್​.ಎಂ.ರಮೇಶ್​ ಗೌಡ, ವೀಣಾ ಅಚ್ಚಯ್ಯ ಎಸ್. ​ನಾರಾಯಣಸ್ವಾಮಿ ಕೆ.ವಿ. ಲೇಹರ್​ ಸಿಂಗ್​ ಅವರ ಅಧಿಕಾರಾವಧಿ ಜೂನ್​ 14ರಂದು ಕೊನೆಗೊಳ್ಳಲಿದೆ.

ಮೇ 17 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಲಿದೆ.  ಮೇ25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 27 ನಾಮಪತ್ರ ವಾಪಾಸ್ ಪಡೆಯಲು ಕಡೆಯದಿನವಾಗಿದೆ.

ಜೂನ್ 3 ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು ಸಂಜೆ 5 ಗಂಟೆಗೆ ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

Key words: Election -date fix – 7 seats –Legislative Council

ENGLISH SUMMARY….

Date for election of 7 MLC constituencies fixed
Bengaluru, May 10, 2022 (www.justkannada.in): The duration of 7 Members of Legislative Council (MLC) will be concluding on June 14. The election for new candidates will be held on June 3.
The Election Commission has announced the date of election. The voting will be held on June 3, and the results will also be announced on the same day. The tenure of MLCs Lakshman Savadi, Ramappa Timmapur, Allam Veerabhadrappa, H.M. Ramesh Gowda, Veena Achaiah, S. Narayanaswamy K.V. and Lehar Singh will end on June 14.
The Election notification will be issued on May 17, and the last date to submit the nominations is May 24. The verification of the nominations will be done on May 25, and the last date to withdraw the nominations is May 27.
The voting will be held from 9.00 am to 4.00 pm on June 3. The counting will begin from 5.00 pm on the same day, and the results will be announced.
Keyword: MLCs/ 7 seats/ June 3/ election