ಆರ್. ಆರ್ ನಗರ ಉಪಚುನಾವಣೆ:  ದರ್ಶನ್, ನೆನಪಿರಲಿ ಪ್ರೇಮ್ ಸೇರಿ ಹಲವು ನಟರಿಂದ ಮತದಾನ..

Promotion

ಬೆಂಗಳೂರು,ನವೆಂಬರ್,3,2020(www.justkannada.in):  ತೀವ್ರ ಕುತೂಹಲ ಮೂಡಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಈ ನಡುವೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಹಲವು ನಟರು ತಮ್ಮ ಹಕ್ಕು ಚಲಾಯಿಸಿದರು.

ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಲಾಯಿಸಿದರು. ನಟ ದರ್ಶನ್ ಅವರು  ಆರ್.ಆರ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ಪ್ರಚಾರ ನಡೆಸಿದ್ದರು.r-r-nagar-by-election-actor-darshan-nenapirali-prem-voting

ಈ ನಡುವೆ ಮತ್ತೊಬ್ಬ ನಟ ನೆನಪಿರಲಿ ಪ್ರೇಮ್ ತಮ್ಮ ಪತ್ನಿ ಜೊತೆಗೆ ಆಗಮಿಸಿ ಮತದಾನ ಮಾಡಿದರು. ಕೊಟ್ಟಿಗೆಪಾಳ್ಯದ ಮತಗಟ್ಟೆಯಲ್ಲಿ ನಟ ನೆನಪಿರಲಿ ಪ್ರೇಮ್ ಪತ್ನಿ ಜೊತೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು. ಈ ವೇಳೆ ಮಾತನಾಡಿದ ಪ್ರೇಮ್, ಮತದಾನಕ್ಕೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇನ್ನು ನಟ ದಿಗಂತ್ ಸಹ ತಮ್ಮ ಹಕ್ಕು ಚಲಾಯಿಸಿದರು ಬಳಿಕ ಮಾತನಾಡಿದ ಅವರು, ಮತಚಲಾಯಿಸುವುದು ನಾಗರಿಕನಾಗಿ ನನ್ನ ಜವಾಬ್ದಾರಿ. ಆ ಜವಾಬ್ದಾರಿಯಿಂದ ಯಾರೂ ತಪ್ಪಿಸಿಕೊಳ್ಳಬಾರದು. ಎಲ್ಲರೂ ಬಂದು ಮತದಾನ ಮಾಡಿ ಎಂದು ಹೇಳಿದರು.

ಹಾಗೆಯೇ ನಟ ಅವಿನಾಶ್ ಅವರು ಮೌಂಟ್ ಕಾರ್ಮಲ್ ಶಾಲೆಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

Key words: R.R nagar-by-election:-actor- Darshan-nenapirali Prem-voting