Thursday, August 13, 2026

BDA Apartments

Home Front Page ಅತ್ತೆ-ಸೊಸೆ ತಾಯಿ ಮಗಳಂತೆ ಚೆನ್ನಾಗಿರಲಿ – ದಿ. ಡಿ.ಕೆ ರವಿ ತಾಯಿ ಅವರ ನಿಲುವು ಕುರಿತು...

ಅತ್ತೆ-ಸೊಸೆ ತಾಯಿ ಮಗಳಂತೆ ಚೆನ್ನಾಗಿರಲಿ – ದಿ. ಡಿ.ಕೆ ರವಿ ತಾಯಿ ಅವರ ನಿಲುವು ಕುರಿತು ಸಿ.ಟಿ ರವಿ ಪ್ರತಿಕ್ರಿಯೆ….

ಚಿಕ್ಕಮಗಳೂರು,ನವೆಂಬರ್,3,2020(www.justkannada.in):  ಆರ್.ಆರ್ ನಗರ ಚುನಾವಣೆಯಲ್ಲಿ ಕುಸುಮಾಗೆ ಮತ ನೀಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ಧ ದಿ. ಡಿ.ಕೆ ರವಿ ಅವರ ತಾಯಿ ಗೌರಮ್ಮ ನಿಲುವು ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅತ್ತೆ-ಸೊಸೆ ತಾಯಿ ಮಗಳಂತೆ ಚೆನ್ನಾಗಿರಲಿ ಎಂದಿದ್ದಾರೆ.jk-logo-justkannada-logo

ಈ ಬಗ್ಗೆ ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ,  ಅತ್ತೆ-ಸೊಸೆ ಜಗಳವಾಡಲಿ ಎಂದು ಹೇಳೂದು ಇಲ್ಲ, ಬಯಸೋದು ಇಲ್ಲ. ನಮಗೆ ಯಾರ ಮೇಲೂ ವ್ಯಕ್ತಿಗತವಾದ ವಿರೋಧ, ದ್ವೇಷ ಇಲ್ಲ ಬದಲಾಗಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ನಮ್ಮದು ತಾತ್ವಿಕ ಹೋರಾಟ ಎಂದರು.

ಡಿ.ಕೆ ರವಿ ಅವರ ತಾಯಿ ನೀಡಿರುವ ಹೇಳಿಕೆ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ.  ಮುಖ ನೋಡಲ್ಲ ಅಂತಿದ್ದೋರು ನೋಡುವಂತಾಗಿರೋದು ಸಂತೋಷದ ಸಂಗತಿ. ಅತ್ತೆ ಸೊಸೆ ಚುನಾವಣೆ ನಂತರವೂ ಜಗಳ ಆಡಬಾರದು. ಅತ್ತೆ-ಸೊಸೆ ತಾಯಿ ಮಗಳಂತೆ ಚೆನ್ನಾಗಿರಲಿ ಎಂದು ಸಿ.ಟಿ ರವಿ ಹೇಳಿದ್ದಾರೆ.dk-ravi-mother-rr-nagar-congress-candidate-kusuma-bjp-ct-ravi

ಚುನಾವಣೆಗೆ ಒಂದು ದಿನ ಮೊದಲು  ಡಿ.ಕೆ ರವಿ ಅವರ ತಾಯಿ ಗೌರಮ್ಮ ವಿಡಿಯೋ ಮೂಲಕ  ಮಾತನಾಡಿ ಆರ್ ಆರ್‌ ನಗರದಲ್ಲಿ ಕುಸುಮಾಗೆ ಮತ ನೀಡಿ ಎಂದು ಮನವಿ ಮಾಡಿದರು.

Key words: DK Ravi- mother-RR Nagar- congress- candidate- kusuma-BJP-CT Ravi