ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್’ನಲ್ಲಿ ಹವಾ ಎಬ್ಬಿಸಿದ ಪೊಗರು!

Promotion

ಬೆಂಗಳೂರು, ಫೆಬ್ರವರಿ 23, 2021 (www.justkannada.in):

ಥಿಯೇಟರ್ ಗಳಲ್ಲಿ ಹವಾ ಎಬ್ಬಿಸಿರುವ ಧ್ರುವ ಸರ್ಜಾ ನಟನೆಯ ಪೊಗರು ಬಾಕ್ಸ್ ಆಫೀಸ್ ನಲ್ಲೂ ಭಾರಿ ಸದ್ದು ಮಾಡುತ್ತಿದೆ.

ಈ ಚಿತ್ರ ಬಿಡುಗಡೆಯಾದ ಮೂರನೇ ದಿನಕ್ಕೆ ಕಲೆಕ್ಷನ್ 30 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಧ್ರುವ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.

ಮೂರೇ ದಿನಕ್ಕೆ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರಿಕೊಂಡಿದೆ ಪೊಗರು. ಅಂದಹಾಗೆ ಚಿತ್ರತಂಡ ಪ್ರತಿದಿನ ಗಳಿಕೆಯ ಲೆಕ್ಕ ಕೊಡುತ್ತಿದೆ.

ಈ ಮೂಲಕ ಎಷ್ಟು ಗಳಿಕೆ ಮಾಡಿದೆ ಎಂಬ ವಿಚಾರವನ್ನು ಜನರೆದುರು ಪಾರದರ್ಶಕವಾಗಿಟ್ಟುಕೊಂಡಿದೆ.