Wednesday, September 30, 2026

BDA Apartments

ಸಂಸಾರ ಸಮೇತ ಬೆಂಗಳೂರಿಗೆ ಬಂದ ಐಶ್ವರ್ಯ: ಸಂಬಂಧಿಕರ ಮದುವೆಯಲ್ಲಿ ಬೊಂಬಾಟ್ ಸ್...
Home Cinema ಸಂಸಾರ ಸಮೇತ ಬೆಂಗಳೂರಿಗೆ ಬಂದ ಐಶ್ವರ್ಯ: ಸಂಬಂಧಿಕರ ಮದುವೆಯಲ್ಲಿ ಬೊಂಬಾಟ್ ಸ್ಟೆಪ್ಸ್!

ಸಂಸಾರ ಸಮೇತ ಬೆಂಗಳೂರಿಗೆ ಬಂದ ಐಶ್ವರ್ಯ: ಸಂಬಂಧಿಕರ ಮದುವೆಯಲ್ಲಿ ಬೊಂಬಾಟ್ ಸ್ಟೆಪ್ಸ್!

ಬೆಂಗಳೂರು, ಫೆಬ್ರವರಿ 23, 2021 (www.justkannada.in): ಬಹಳ ಬಳಿಕ ಕರಾವಳಿ ಬೆಡಗಿ ಐಶ್ವರ್ಯ ರೈ ಪತಿ, ಮಗಳೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಐಶ್ವರ್ಯಾ ತಮ್ಮ ಸಂಸಾರ ಸಮೇತ ಬೆಂಗಳೂರಿಗೆ ಬಂದಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ಚಿಕ್ಕಮ್ಮನ ಮಗಳ ಮದುವೆಯಿತ್ತು. ಈಕಾರ್ಯಕ್ರಮದಲ್ಲಿ ಭಾಗಿಯಾಗಲು ಐಶ್ವರ್ಯಾ ಪತಿ ಅಭಿಷೇಕ್, ಪುತ್ರಿ ಆರಾಧ್ಯ ಜೊತೆ ಬಂದಿದ್ದಾರೆ.

ಕಾರ್ಯಕ್ರಮದಲ್ಲಿ ತಮ್ಮ ಸಂಬಂಧಿಕರ ಜತೆಗೆ ಹೆಜ್ಜೆ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ.