ಕಾರ್ಮಿಕರ ದಿನಾಚಾರಣೆ: ಮೈಸೂರಿನ ಬ್ಯಾಕ್ಬೋನ್ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಸನ್ಮಾನ…

ಮೈಸೂರು,ಮೇ,1,2019(www.justkannada.in): ಇಂದು ಕಾರ್ಮಿಕರ ದಿನಾಚಾರಣೆ ಅಂಗವಾಗಿ ಮೈಸೂರಿನ ಕುವೆಂಪುನಗರದ ಬ್ಯಾಕ್ಬೋನ್ ಸಂಸ್ಥೆಯ ವತಿಯಿಂದ ನಿವೇದಿತಾನಗರದ ಪ್ರದೇಶದಲ್ಲಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ನಿವೇದಿತಾನಗರ ಬಡಾವಣೆಯಲ್ಲಿರುವ ಉದ್ಯಾನವನದ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಪೌರ ಕಾರ್ಮಿಕರಿಗೆ ಶಾಲು ಹೊದಿಸಿ ಹೂಗುಚ್ಛ, ತಾಂಬೂಲ ನೀಡಿ ಆತ್ಮೀಯವಾಗಿ ಅಭಿನಂದಿಸಿದರು.

ವಾರ್ಡ್ ನ ವ್ಯಾಪ್ತಿಯಲ್ಲಿ ನಿರಂತರವಾಗಿ ಕೆಲಸ ಮಾಡುವ 26 ಪೌರ ಕಾರ್ಮಿಕರಿಗೂ ಆಹ್ವಾನ ನೀಡಿ ಸನ್ಮಾನಿಸುವ ಮೂಲಕ ಅವರಲ್ಲಿ ಮಂದಹಾಸ ಮೂಡುವಂತೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಯಾಕ್ಬೋನ್ ಸಂಸ್ಥೆ ಕಾರ್ಯದರ್ಶಿ ಎಚ್.ಎಸ್.ಅಶ್ವಿನಿ ಮಾತನಾಡಿ, ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಶ್ರಮ ಅಪಾರವಾಗಿದೆ. ಮೈಸೂರು ಇಂದು ಪ್ರಶಸ್ತಿ ಪಡೆಯಲು ಇವರೇ ಕಾರಣವಾಗಿದೆ ಎಂದರು.

ಇಂದು ಕಾರ್ಮಿಕರ ದಿನವಾಗಿದೆ. ಕಾರ್ಮಿಕರು ವರ್ಷಪೂರ್ತಿ ದುಡಿದರೂ ಇಂದು ನಾನಾ ಕಾರಣಕ್ಕಾಗಿ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸರಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆ ಪ್ರಯೋಜನ ಪಡೆಯಬೇಕು ಎಂದರು.

ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿ ಪೌರ ಕಾರ್ಮಿಕರನ್ನು ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಸನ್ಮಾನಿಸುವ ಮೂಲಕ ಅವರಿಗೂ ಗೌರವ ಕಲ್ಪಿಸಲಾಗಿದೆ ಎಂದು ತಿಳಿಸಿದರು. ನಮ್ಮ ಸಂಸ್ಥೆಯ ವತಿಯಿಂದಲೇ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದ್ದು, ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ ಎಂದರು. ಇದಕ್ಕೂ ಮೊದಲು ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಬಡಿಸುವ ಮೂಲಕ ಎಲ್ಲರಂತೆ ನಮ್ಮವರೆಂದು ಕಾಣಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀಲಕ್ಷ್ಮೀ, ಯತೀಶ್, ಸಿ. ವೀಣಾ, ಅಮಿತ್ರಾಜ್ ಮೊದಲಾದವರು ಉಪಸ್ಥಿತರಿದ್ದರು.

Key words: Labor Day- Labor- honored – Backbone- Institute – Mysore.