‘ದಿಲ್ ಮಾರ್’ ಡೈರೆಕ್ಷರ್ ಆದ ಕೆಜಿಎಫ್ ಡೈಲಾಗ್ ರೈಟರ್ !

ಬೆಂಗಳೂರು, ಆಗಸ್ಟ್ 17, 2019 (www.justkannada.in): ಸಂಭಾಷಣೆಕಾರರಾಗಿ ಹಾಗೂ ನಿರ್ದೇಶಕನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರೀಗ ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ.

ಈ ಸಾಲಿಗೆ ಹೊಸ ಸೇರ್ಪಡೆ ಕೆಜಿಎಫ್ ಡೈಲಾಗ್ ರೈಟರ್.

ಹೌದು. ಚಂದ್ರಮೌಳಿ ಡೈರೆಕ್ಟರ್ ಆಗಿ ಭಡ್ತಿ ಪಡೆಯುತ್ತಿದ್ದಾರೆ. ಚಂದ್ರಮೌಳಿ ಹೊಸ ಹುಡುಗನನ್ನು ಹೀರೋ ಆಗಿ ಲಾಂಚ್ ಮಾಡುವ ಮೂಲಕವೇ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಹೊಸ ಹುಡುಗ ರಾಮ್ ಈ ಚಿತ್ರಕ್ಕೆ ನಾಯಕನಟರಾಗಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ‘ದಿಲ್ ಮಾರ್’ ಎಂಬ ಹೆಸರು ಫಿಕ್ಸ್ ಆಗಿದೆ.

ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಮೂಹೂರ್ತ ಸಮಾರಂಭ ಇದೇ ಹದಿನೆಂಟರಂದು ನಡೆಯಲಿದೆ.