ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಸೇವಾವಧಿ 1 ವರ್ಷ ವಿಸ್ತರಣೆ.

Promotion

ಬೆಂಗಳೂರು,ಜುಲೈ,18,2022(www.justkannada.in): ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್  ಅವರ ಸೇವಾವಧಿಯನ್ನ ಒಂದು  ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ್ ಮುಂದುವರಿಕೆ ಮಾಡಲಾಗಿದೆ. ನಾಳೆ ನಿರ್ದೇಶಕ ಸ್ಥಾನದ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದ ಹಿನ್ನಲೆ ರಾಜ್ಯ ಸರ್ಕಾರ ಒಂದು ವರ್ಷದ ಅವಧಿ ವಿಸ್ತರಿಸಿದೆ.

ಡಾ. ಸಿ ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ, ಸೇವಾವಧಿ ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಖುದ್ದು ಕರೆ ಮಾಡಿ ತಿಳಿಸಿದ್ದು ಈ ಕುರಿತು ಅಧಿಕೃತ ಆದೇಶ ಬಾಕಿ ಇದೆ ಎನ್ನಲಾಗಿದೆ. ಡಾ.ಸಿ.ಎನ್ ಮಂಜುನಾಥ್ 2005ರಿಂದಲೂ ಜಯದೇವೆ ಆಸ್ಪತ್ರೆಯ ಸಾರಥ್ಯ ವಹಿಸಿದ್ದಾರೆ

Key words: Jayadeva Hospital-Director-Dr. CN Manjunath-extension – service -1 year.