ಇಂತಹ ಜಿಲ್ಲೆ ಉಸ್ತುವಾರಿ ಬೇಕೆಂದು ನಾನು ಟವಲ್ ಹಾಕಿಲ್ಲ- ಸಚಿವ ಆರ್.ಅಶೋಕ್.

Promotion

ಬೆಂಗಳೂರು,ಅಕ್ಟೋಬರ್,9,2021(www.justkannada.in):  ಬೆಂಗಳೂರು ನಗರ ಉಸ್ತುವಾರಿ ಕುರಿತು ಸಚಿವದ್ವಯರ ನಡುವೆ ಸಮರ ಏರ್ಪಟ್ಟಿದ್ದು ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್,  ಇಂತಹ ಜಿಲ್ಲೆ ಉಸ್ತುವಾರಿ ಬೇಕೆಂದು ನಾನು ಟವಲ್ ಹಾಕಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ಬೆಂಗಳೂರು ಉಸ್ತುವಾರಿ ಯಾರಿಗೆ ನೀಡಿದ್ರೂ ಕೆಲಸ ಮಾಡುವೆ. ಉಸ್ತುವಾರಿ ಸ್ಥಾನ ನೀಡೋದು  ಸಿಎಂ ಪರಮಾಧಿಕಾರ.  ಯಾರಿಗೆ ಸಚಿವ ಸ್ಥಾನ ನೀಡಿದ್ರೂ ಒಟ್ಟಾಗಿ ಕೆಲಸ ಮಾಡುತ್ತೇವೆ.  ಇಂತಹ ಜಿಲ್ಲೆ ಉಸ್ತುವಾರಿ ಬೇಕೆಂದು ನಾನು ಟವಲ್ ಹಾಕಿಲ್ಲ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಅವರ ಜತೆ ಮಾತನಾಡಿದ್ದೇನೆ. ವಿ.ಸೋಮಣ್ಣ ಮಾತನಾಡುವ ಧಾಟಿಯೇ ಹಾಗೆ. ಸೋಮಣ್ಣ ಹೇಳುತ್ತಿರುವುದು ಸರಿ ಇದೆ.  ಸಭೆಗೆ ನಾನು ಗೈರಾಗಿದ್ದು ನಿಜ. ಚಿಕ್ಕಮಗಳೂರಿಗೆ ತೆರಳಿದ್ಧ ಹಿನ್ನೆಲೆ ಗೈರಾಗಿದ್ದೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದರು.

Key words: I am -not –towel-incharge-Minister- R. Ashok.