ಚಿತ್ರೀಕರಣ ಪೂರೈಸಿ ‘ಡಬ್ಬಿಂಗ್’ ಶುರು ಮಾಡಿದ ದುನಿಯಾ ಸೂರಿ ‘ಪಾಪ್​ ಕಾರ್ನ್​ ಮಂಕಿ ಟೈಗರ್’

ಬೆಂಗಳೂರು, ಅಕ್ಟೋಬರ್ 31, 2019 (www.justkannada.in): ದುನಿಯಾ ಸೂರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಪಾಪ್​ ಕಾರ್ನ್​ ಮಂಕಿ ಟೈಗರ್​ ಡಬ್ಬಿಂಗ್ ಪ್ರಾರಂಭವಾಗಲಿದ್ದು, ಶೀಘ್ರದಲ್ಲೇ ಟೀಸರ್​ ಮೂಲಕ ಅಬ್ಬರಿಸಲಿದೆ.

ದುನಿಯಾ ಸೂರಿಯ ಮಹಾತ್ವಾಕಾಂಕ್ಷೆಯ ಪಾಪ್​ ಕಾರ್ನ್​ ಮಂಕಿ ಟೈಗರ್​ ಡಬ್ಬಿಂಗ್​ ಶುರುವಾಗಿದ್ದು, ಭಿನ್ನ ಶೀರ್ಷಿಕೆಯ ಚಿತ್ರದ ಟೀಸರ್​ ಶೀಘ್ರದಲ್ಲಿ ರಿಲೀಸ್​ ಆಗಲಿದೆ. ನಿರ್ದೇಶಕ ಸೂರಿಯವರ ಮಹಾತ್ವಾಕಾಂಕ್ಷೆಯ ಚಿತ್ರವೊಂದು ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

ಈ ಮೂಲಕ ದುನಿಯಾ ಸೂರಿ ನಿರ್ದೇಶನದಲ್ಲಿ ಪಾಪ್​ ಕಾರ್ನ್ ಮಂಕಿ ಟೈಗರ್​ ಎಂಬ ಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಡಾಲಿ ಧನಂಜಯ್​ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಬುಧವಾರ, ಅ.30 ರಂದು ಆಕಾಶ್​ ಸ್ಟುಡಿಯೋದಲ್ಲಿ ತನ್ನ ಡಬ್ಬಿಂಗ್​ ಕಾರ್ಯವನ್ನು ಆರಂಭಿಸಿದೆ.

ಪಾಪ್​ ಕಾರ್ನ್​ ಚಿತ್ರವು ಒಂದು ಸಾಹಸ ಪ್ರಧಾನ ಮತ್ತು ರೋಚಕ ಕಥಾಹಂದರವನ್ನು ಹೊಂದಿದೆ. ದನಂಜಯ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಪ್​ ಕಾರ್ನ್​ ಚಿತ್ರದ ಕಥೆಯು ಟಗರು ಚಿತ್ರಕ್ಕಿಂತಲೂ ಮೊದಲೇ ತಯಾರಾಗಿದೆ. ಇದು ಒಂದು ನೈಜ ಕಥಾನಕವನ್ನು ಹೊಂದಿದ್ದು ಚಿತ್ರ ಸೆಟ್ಟೇರುವ ಹಿಂದೆಯೂ ಹಲವು ಕುತೂಹಲದ ಕಥೆಗಳಿವೆ.

ಸೂರಿ ಇದನ್ನು ಬಹಳ ಶ್ರಮ ವಹಿಸಿ ಇದನ್ನು ತೆಗೆದುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಓಡಾಡುತ್ತಿರುವ ಈ ಪಾಪ್​ ಕಾರ್ನ್​ ಈಗ ಬಿಡುಗಡೆಯ ಹಂತದವರೆಗೂ ಬಂದಿದೆ. ಪಾಪ್​ ಕಾರ್ನ್​ ಚಿತ್ರಕ್ಕೆ ಸುಧೀರ್​ ಕೆ ಎಂ ಬಂಡವಾಳ ಹೂಡಿದ್ದಾರೆ. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಪಾಪ್​ ಕಾರ್ನ್​ ಅವರಿಗೆ ಚೊಚ್ಚಲ ಸಿನಿಮಾ.

ಶೇಖರ್​ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ದೀಪು ಎಸ್​​ ಕುಮಾರ್​ ಚಿತ್ರದ ಸಂಕಲನ ನೋಡಿಕೊಂಡಿದ್ದಾರೆ. ಚರಣ್​ ರಾಜ್​ ರಾಗ ಸಂಯೋಜಿಸಿದ್ದಾರೆ. ದುನಿಯಾ ಸೂರಿ ಪಾಪ್​ ಕಾರ್ನ್​ ಮಂಕಿ ಟೈಗರ್​ ಚಿತ್ರಕ್ಕೆ ಆ್ಯಕ್ಷನ್ ಕಟ್​ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್​, ನಿವೇದಿತಾ, ಅಮೃತಾ, ಸಪ್ತಮಿ ಮೊದಲಾದವರು ನಟಿಸಿದ್ದಾರೆ.