ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇಕಡಾ 88.78ರಷ್ಟು ಫಲಿತಾಂಶ

ನವದೆಹಲಿ, ಜುಲೈ 13, 2020 (www.justkannada.in): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ.

ಒಟ್ಟಾರೆ ಶೇಕಡಾ 88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆ ಫಲಿತಾಂಶ ಶೇಕಡಾ 5.38ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಒಟ್ಟಾರೆ ಫಲಿತಾಂಶ ಶೇಕಡಾ 83.40ರಷ್ಟಾಗಿತ್ತು.

ಕೇರಳದ ತಿರುವನಂತಪುರ ವಲಯದಲ್ಲಿ ಅತಿಹೆಚ್ಚು ತೇರ್ಗಡೆ ಫಲಿತಾಂಶ ಶೇಕಡಾ 97.67 ದಾಖಲಾಗಿದೆ. ಪಾಟ್ನಾದಲ್ಲಿ ಅತಿ ಕಡಿಮೆ ಫಲಿತಾಂಶ ಶೇಕಡಾ 74.57 ದಾಖಲಾಗಿದೆ.

ಬೆಂಗಳೂರು ವಲಯದಲ್ಲಿ ಶೇಕಡಾ 97.05ರಷ್ಟು ಫಲಿತಾಂಶ ಬಂದಿದ್ದು ಅದು ದೇಶದ ಒಟ್ಟಾರೆ ಫಲಿತಾಂಶ ಶೇಕಡಾ 88.78ಕ್ಕಿಂತ ಹೆಚ್ಚಾಗಿದೆ. ದೇಶದ ಒಟ್ಟಾರೆ 16 ವಲಯಗಳಲ್ಲಿ ತಿರುವನಂತಪುರದ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಪಶ್ಚಿಮ ಮತ್ತು ಪೂರ್ವ ವಲಯಗಳು ಇವೆ.