ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಾವು ಹೆಚ್ಚಳ: ಅಧ್ಯಯನಕ್ಕೆ ತಜ್ಞರ ತಂಡ ಆಗಮನ

ಮೈಸೂರು, ಜುಲೈ 13, 2020 (www.justkannada.in): ಕೆ ಆರ್ ಆಸ್ಪತ್ರೆಯಲ್ಲಿ ಕೋವಿಡ್ ಸಾವಿನ ಹೆಚ್ಚಳ ವಿಚಾರ ಅಧ್ಯಯನ್ನಕ್ಕಾಗಿ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದು, ದೇಶದಲ್ಲಿ ಕೋವಿಡ್ ಸಾವಿನ ಶೇಕಡವಾರು ಪ್ರಮಾಣ 1.5 ರಷ್ಟಿದೆ. ಆದ್ರೆ ಮೈಸೂರಲ್ಲಿ ಇದುವರೆಗೆ 28 ಜ‌. ಸಾವನಪ್ಪಿದ್ದಾರೆ. ದೇಶಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ಅತೀ ಹೆಚ್ಚು ಇದೆ. ಅದರಲ್ಲೂ ಕೆ ಆರ್ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ILI ಮತ್ತು SARI ಕೇಸ್ ಗಳು ಕೆ ಆರ್ ಆಸ್ಪತ್ರೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರಿನ ವೈದ್ಯರು ಮತ್ತು ತಜ್ಞರ ತಂಡ ಮೈಸೂರಿಗೆ ಆಗಮಿಸಿದೆ ಎಂದು ತಿಳಿಸಿದ್ದಾರೆ.

ಎನ್ ಆರ್ ಕ್ಷೇತ್ರದ ಆಯ್ದ ಭಾಗಗಳಲ್ಲಿ ಕೋವಿಡ್ ಕ್ಯಾಂಪ್ ಮಾಡಲಾಗುತ್ತದೆ. ಜನ ನಮ್ಮ ಬಳಿ ಬಂದು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರು. ಈಗ ರಿವರ್ಸ್ ಆಪರೇಷನ್ ಗೆ ಚಿಂತನೆ ಮಾಡುತಿದ್ದೇವೆ. ಅಂದರೆ ನಾವೆ ಜನರ ಬಳಿ ಹೋಗಿ ಟೆಸ್ಟ್ ಮಾಡುತ್ತೇವೆ ಎಂದು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.

ಆಂಟಿಜೆನ್ ಕಿಟ್ ಗಳನ್ನ ಬಳಸಿಕೊಂಡು ನಿರ್ಧಿಷ್ಟ ಪ್ರದೇಶದ ಜನರನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ಇದರಿಂದಾಗಿ ರೊಇಗದ ಗುಣಲಕ್ಷಣ ಇರುವವರು ಆಸ್ಪತ್ರೆಯಿಂದ ಟೆಸ್ಟ್ ಲ್ಯಾಬ್. ಲ್ಯಾಬ್ ನಿಂದ ಮನೆಗೆ ಓಡಾಡುವುದು ತಪ್ಪುತ್ತದೆ.
ಆಂಟಿಜೆನ್ ಕಿಟ್ ಗಳಲ್ಲಿ ಕೇವಲ ಅರ್ಧ ಗಂಟೆಯಲ್ಲಿ ರಿಸಲ್ಟ್ ಸಿಗುತ್ತೆ ಎಂದು ಮಾಹಿತಿ ನೀಡಿದ್ದಾರೆ.