ಕರ್ನಾಟಕ ಭವನ-3ರ ಭೀಮಾ’ ಇಂದಿನಿಂದ ಪ್ರಾರಂಭ: ಪೂಜೆ ಸಲ್ಲಿಕೆ…

ನವದೆಹಲಿ,ನವೆಂಬರ್,11,2020(www.justkannada.in): ನವದೆಹಲಿಯ ಖೇಲ್ ಗಾಂವ್ ಮಾರ್ಗದಲ್ಲಿರುವ ಕರ್ನಾಟಕ ಭವನ-3ರ ಭೀಮಾ’ ಕೆಎಸ್ ಟಿಡಿಸಿ ಇವರ ಮೂಲಕ ಇಂದಿನಿಂದ  ಪ್ರಾರಂಭಗೊಂಡಿತು.

ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ .ಈ. ಪಾಟೀಲ್ ಅವರು ಪೂಜೆ ನೆರವೇರಿಸುವುದರ ಮೂಲಕ ಕರ್ನಾಟಕ ಭವನ-3ರ ಭೀಮಾ’ ವಿದ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೆಎಸ್ ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ ಪುಷ್ಕರ್, ನವದೆಹಲಿಯ ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತ ವಿಜಯ ರಂಜನ್ ಸಿಂಗ್, ವಿಶೇಷ ನಿವಾಸಿ ಆಯುಕ್ತರಾದ ಮೀರಾ ಶ್ರೀವಾತ್ಸವ, ಅಪರ ನಿವಾಸಿ ಆಯುಕ್ತರಾದ ಗುರ್ನೀತ್ ತೇಜ್, ಉಪ ನಿವಾಸಿ ಆಯುಕ್ತ ಎಚ್. ಪ್ರಸನ್ನ, ಸಂಸದರ ಕೋಶ ವಿಭಾಗದ ಉಪ ನಿವಾಸಿ ಆಯುಕ್ತ ಬಿ.ವಿ.ವಿಠ್ಠಲ್, ನವದೆಹಲಿಯ ಕರ್ನಾಟಕ ಭವನ ಹಾಗೂ ಕೆ ಎಸ್ ಟಿಡಿಸಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. newdehli-Karnataka Bhavan-3 – bema- Worship

ಕರ್ನಾಟಕ ಭವನ- “ಭೀಮ”ದಲ್ಲಿ ಒಟ್ಟು 34 ಕೊಠಡಿಗಳಿದ್ದು, 5 ವಿಐಪಿ ಕೊಠಡಿಗಳು, 2 ಹಾಸಿಗೆಯ 25 ಕೊಠಡಿಗಳು, ಕರ್ನಾಟಕ ಉದ್ಯೋಗ ಮಿತ್ರ ಕಛೇರಿಗಾಗಿ 2 ಕೊಠಡಿಗಳು, ಕೆಪಿಸಿಎಲ್ ಕಛೇರಿಗೆ 1 ಕೊಠಡಿ ಮತ್ತು 1 ಉಗ್ರಾಣ ಕೊಠಡಿಯಿದೆ ಇದರೊಂದಿಗೆ ನೆಲ ಮಹಡಿಯಲ್ಲಿ ಕಾವೇರಿ ಮತ್ತು ಕೃಷ್ಣ ಜಲ ಕೋಶಗಳ ಕಛೇರಿಗಳು ಕರ್ತವ್ಯ ನಿರ್ವಹಿಸುತ್ತಿವೆ.

Key words: newdehli-Karnataka Bhavan-3 – bema- Worship