“ಹೊಸ ಶಿಕ್ಷಣ ನೀತಿಯು ವಿಮರ್ಶಾತ್ಮಕ ಚಿಂತನೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,09,2021(www.justkannada.in) : ಹೊಸ ಶಿಕ್ಷಣ ನೀತಿಯು ವಿಮರ್ಶಾತ್ಮಕ ಚಿಂತನೆಯಾಗಿದ್ದು, ವೈಜ್ಞಾನಿಕ ಕಲಿಕೆಯನ್ನು ಉತ್ತೇಜಿಸುತ್ತದೆ. ಅಂಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೃಜನಶೀಲತೆ, ಕುತೂಹಲ ಮತ್ತು ಸಂವಹನ ಕೌಶಲ್ಯಗಳನ್ನು ಉತ್ತೇಜಿಸುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.New-Education-Policy-Critical-Thought-Chancellor-Prof.G.Hemant Kumarಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ” ಅವಕಾಶಗಳು ಮತ್ತು ಮುಂದಿನ ದಾರಿ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಮತ್ತಷ್ಟು ಜ್ಞಾನವನ್ನು ನೀಡಲಿದೆ. ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಯ ವಿದ್ವಾಂಸರು ಮುಖ್ಯವಾಗಿದ್ದು,  ನಾವು ಆಲೋಚಿಸುವ ಮತ್ತು ಕಾರ್ಯಗತಗೊಳಿಸುವ ಎಲ್ಲವೂ ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಪುರಕವಾಗಿರಬೇಕು ಎಂದರು.

ಹೊಸ ಶಿಕ್ಷಣ ನೀತಿ-2020 ಸಂಬಂಧಿಸಿದಂತೆ ವಿದ್ಯಾರ್ಥಿಗಳ ಗಮನ ಸೆಳೆಯಲು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ನೀತಿಯ ಮೂಲಭೂತ ತತ್ವಗಳಲ್ಲಿ ಒಂದಾದ “ಕಲೆ ಮತ್ತು ವಿಜ್ಞಾನಗಳ ನಡುವೆ, ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಯಾವುದೇ ಪ್ರತ್ಯೇಕತೆ ಬೇಡ ಎಂದು ಹೇಳಿದರು.

ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಕೋಡಿಂಗ್, ಕೃತಕ ಬುದ್ಧಿಮತ್ತೆ, ವಸ್ತುಗಳ ಅಂತರ್ಜಾಲ, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಮತ್ತು ರೊಬೊಟಿಕ್ ಮೊದಲಾದ ಪರಿಕಲ್ಪನೆಗಳನ್ನು ಕಲಿಯಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಟ ಸಾಮರ್ಥ್ಯ, ಯೋಗ್ಯತೆಯ ವರದಿಯ ವಿವರವಾದ ಹಾಳೆಯನ್ನು NEP ನೀಡುತ್ತದೆ ಎಂದು ಮಾಹಿತಿ ನೀಡಿದರು.

New-Education-Policy-Critical-Thought-Chancellor-Prof.G.Hemant Kumar

ವಿದ್ಯಾರ್ಥಿಗಳ ವರ್ತನೆ, ಪ್ರತಿಭೆ, ಕೌಶಲ್ಯ, ದಕ್ಷತೆ, ಸಾಮರ್ಥ್ಯ ಮತ್ತು ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಕಲಿಯುವುದಕ್ಕೆ ಸಹಕಾರಿಯಾಗಿದೆ. ಆದ್ದರಿಂದ ವಿವಿಧ ಭಾಷಾ ಗುಂಪುಗಳು ಮತ್ತು ಸಮುದಾಯಗಳ ಜನರ ನಡುವೆ ತಿಳುವಳಿಕೆ ಮತ್ತು ಸಾಮರಸ್ಯವನ್ನುಂಟು ಮಾಡಬಹುದಾಗಿದೆ ಎಂದರು.

ಕೈಗಾರಿಕೆಗಳ ಸಹಯೋಗದೊಂದಿಗೆ ಎನ್‌ಇಪಿ ವೃತ್ತಿಪರ ಕೋರ್ಸ್‌ಗಳನ್ನು ಬೆಂಬಲಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಹಕಾರಿಯಾಗಿದೆ. ಎನ್ಇಪಿ-2020 ಬೇಡಿಕೆಯಂತೆ  ಸಹಕರಿಸುವ ನಿಟ್ಟಿನಲ್ಲಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಹೇಳಿದರು.New-Education-Policy-Critical-Thought-Chancellor-Prof.G.Hemant Kumar

ಶಿಕ್ಷಣ ತಜ್ಞರು, ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಇದರಿಂದ ಅವರ ದೈಹಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಅಭಿವೃದ್ಧಿಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಾನವನ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೊಸ ಶಿಕ್ಷಣ ನೀತಿಯ ಯಶಸ್ವಿಗಾಗಿ ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಎಬಿಆರ್ ಎಸ್ ಎಂನ ಪ್ರಧಾನ ಕಾರ್ಯದರ್ಶಿ ಶಿವನಂದ ಸಿಂಡಂಕೆರ ಅವರು ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಶಿಕ್ಷಕರು ಮನಸ್ಸು ಮಾಡಿದರೆ ಯಶಸ್ವಿಗೊಳಿಸುವುದು ಸುಲಭ. ಈ ಹೊಸ ಶಿಕ್ಷಣ ನೀತಿಯಿಂದ ದೇಶದ ದಿಕ್ಕು ಬದಲಾಗಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮೈಸೂರು ಕುಲಸಚಿವ ಆರ್.ಶಿವಪ್ಪ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಡಾ.ಲಿಂಗರಾಜ್ ಗಾಂಧಿ, ಕೆಆರ್ ಎಂಎಸ್ಎಸ್ ಅಧ್ಯಕ್ಷ ಡಾ.ರಘುಅಕಮಂಚಿ, ಅರುಣ್ ಶಹಾಪುರ, ಡಾ.ಗೋಪಾಲಕೃಷ್ಣ ಜೋಶಿ ಇತರರು ಉಪಸ್ಥಿತರಿದ್ದರು.

ENGLISH SUMMARY….

The New Education Policy is a critical thought: Prof. G. Hemanth Kumar
Mysuru, Jan. 09, 2021 (www.justkannada.in): “The New Education Policy is critical thought and it encourages scientific learning. It gives lesser preference to marks and encourages creativity, interest, and communication skills,” opined Prof. G. Hemanth Kumar, Vice-Chancellor, University of Mysore.
“The National Education Policy (NEP)-2020 will provide more knowledge. Students, youth, and scholars are more important and all that we think and implement should be for the welfare of the students. We have to come up with new programmes so as to attract students. There should not be any difference between arts and science, and curriculum and extra-curricular activities,” he explained.New-Education-Policy-Critical-Thought-Chancellor-Prof.G.Hemant Kumar
He also explained that the new policy will enable the students to learn coding, artificial intelligence, product network, cloud computing, data science, and robotics. It provides the special capability and efficiency detailed report.
Keywords: National Education Policy (NEP)/ seminar/ University of Mysore

key words : New-Education-Policy-Critical-Thought-Chancellor-Prof.G.Hemant Kumar