ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗೆ ಒತ್ತು : ಡಿಸಿಎಂ ಅಶ್ವಥ್ ನಾರಾಯಣ

ಬೆಂಗಳೂರು,ನವೆಂಬರ್,02,2020(www.justkannada.in) : ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈಗ ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡವನ್ನು ಒಂದನೇ ತರಗತಿಯಿಂದ ಅಲ್ಲ. ನರ್ಸರಿಯಿಂದಲೇ ಕಲಿಸುವ ಕೆಲಸವಾಗಬೇಕು. ಇದಕ್ಕೆ ನಮ್ಮ ಸರ್ಕಾರ ಸಹ ಬದ್ಧ ಎಂದು  ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.jk-logo-justkannada-logo

ಸೋಮವಾರ ವಿಧಾನಸೌಧದಲ್ಲಿ ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿಯನ್ನು ಹಾಗೂ ಸಂಪುಟಗಳ ಡಿಜಿಟಲ್ ಆವೃತ್ತಿಗಳ(EPUB) ವರ್ಚುವಲ್ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇಂಗ್ಲಿಷ್ ಇವತ್ತು ಉಳ್ಳವರ ಭಾಷೆ ಆಗ್ತಿದೆ

ಎಲ್ಲರೂ ಭಾಷಣದಲ್ಲಿ ಕನ್ನಡ… ಕನ್ನಡ..ಎಂದು ಮಾತ್ರ ಹೇಳುತ್ತೇವೆ. ಆದರೆ, ಸ್ಥಿತಿವಂತರು ಯಾರೂ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಕೂಡಿಸುತ್ತಿಲ್ಲ. ಇಂಗ್ಲಿಷ್ ಇವತ್ತು ಉಳ್ಳವರ ಭಾಷೆ ಆಗ್ತಿದೆ ಎಂದು ಅಶ್ವಥ್ ನಾರಾಯಣ ಬೇಸರವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯವನ್ನು ಬೇರೆ ಭಾಷೆ ಮತ್ತು ದೇಶಗಳಿಗೆ ಮುಟ್ಟಿಸುವ ಕೆಲಸವಾಗಬೇಕುNational-Education-Policy-Emphasis-regional-language-DCM Ashwath Narayana

ನಮ್ಮತನವನ್ನು ಉಳಿಸಿಕೊಳ್ಳಬೇಕಿದ್ದರೆ ಮಾತೃಭಾಷೆಯನ್ನು ಅಳವಡಿಸಿ ಬೆಳೆಸಬೇಕು. ಕನ್ನಡ ಸಾಹಿತ್ಯ ಫಲವತ್ತಾಗಿದೆ. ಇದರಲ್ಲಿ ಶ್ರೇಷ್ಠ ದರ್ಜೆಯ ಸಾಹಿತಿಗಳ ಬರಹ ಹೇರಳವಾಗಿದೆ. ಇದನ್ನು ಬೇರೆ ಭಾಷೆ ಮತ್ತು ದೇಶಗಳಿಗೆ ಮುಟ್ಟಿಸುವ ಕೆಲಸವಾಗಬೇಕು. ತಂತ್ರಜ್ಞಾನ ಬಳಸಿ ಇದನ್ನು ವಾಣಿಜ್ಯ ದೃಷ್ಟಿಯಿಂದಲೂ ಬಳಕೆ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಿದೆ ಎಂದರು.

12 ಸಂಪುಟಗಳ ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಗಳಲ್ಲಿ ನಾಟಕ, ಪದ್ಯ, ಗದ್ಯಗಳನ್ನು ಒಳಗೊಂಡ ಒಟ್ಟು 12 ಸಾವಿರ ಪುಟಗಳಿದೆ ಎಂದು ತಿಳಿಸಿದರು.National-Education-Policy-Emphasis-regional-language-DCM Ashwath Narayana

key words : National-Education-Policy-Emphasis-regional-language-DCM Ashwath Narayana