ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ನಿರ್ಧಾರ ಕುರಿತು ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಜು,12,2019(www.justkannada.in) ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಹೇಳಿದ್ದಾರೆ. ಅವರು ಎಂದು ಸಮಯ ಕೇಳುತ್ತಾರೋ ಆ ಮರುದಿನ  ಅದನ್ನ ಸದನದ ಕಲಾಪ ಸಲಹಾ ಸಮಿತಿ ಮುಂದೆ ಇಡುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು ಸದನದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ನಿರ್ಧರಿಸಿದ್ದು ಸಮಯ ನಿಗದಿ ಮಾಡುವಂತೆ ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ರಮೇಶ್ ಕುಮಾರ್, ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನಸ್ಸಿನ ಮಾತನ್ನ ಸಡನ್ ಆಗಿ ಹೇಳಿದ್ದಾರೆ. ವಿಶ್ವಾಸ ಮತಯಾಚನೆಗೆ  ಹೆಚ್.ಡಿಕೆ  ಹೆಚ್ಚಿನ ಸಮಯ ಕೇಳಲ್ಲ. ಅದಷ್ಟು ಬೇಗ ಸಮಯ ಕೇಳುತ್ತಾರೆ ಎಂದು ಎನಿಸುತ್ತಿದೆ. ಅವರು ಎಂದು ಸಮಯ ಕೇಳುತ್ತಾರೋ ಆ ಮರುದಿನ  ಅದನ್ನ ಸದನದ ಕಲಾಪ ಸಲಹಾ ಸಮಿತಿ ಮುಂದೆ ಇಡುತ್ತೇನೆ ಎಂದು ತಿಳಿಸಿದರು.

Key words: CM HD Kumaraswamy- Speaker -Ramesh Kumar -decision – confidence vote.