ಮೈಸೂರು: ಸಾಲಬಾಧೆಗೆ ರೈತ ಬಲಿ…

ಮೈಸೂರು,ಜು,12,2019(www.justkannada.in): ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಎಚ್ ಡಿ ಕೋಟೆ ತಾಲೂಕಿನ ಅಂಕನಾಥಪುರದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ  ರಾಮಪ್ಪ (40) ನೇಣಿಗೆ ಶರಣಾದ ರೈತ.. ರಾಮಪ್ಪ ಕೃಷಿಗಾಗಿ  ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಸಾಲಬಾಧೆ ತಾಳಲಾರದೆ ರಾಮಪ್ಪ  ತಮ್ಮ ಮನೆ ಹಿಂಭಾಗ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆ ಗೆ ಮೃತ ದೇಹ ರವಾನೆಯಾಗಿದ್ದು ಎಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  farmer- commits- suicide – Mysore