ರಾಷ್ಟ್ರೀಯ ಶಿಕ್ಷಣ ‌ನೀತಿ ಪಠ್ಯ ಸಿದ್ಧ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಆಗಸ್ಟ್,28,2021(www.justkannada.in):  ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಬೇಕಾದ ಜ್ಞಾನ ಹಾಗೂ ಕೌಶಲವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನೀಡುತ್ತದೆ. ಸದ್ಯ ಮೊದಲ ಹಂತದ ಪಠ್ಯಕ್ರಮಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಹೇಳಿದರು.

ಮಾನಸ ಗಂಗೋತ್ರಿಯ ಸಮಾಜ ಕಾರ್ಯ ವಿಭಾಗದ ವತಿಯಿಂದ ರಾಷ್ಟ್ರೀಯ ಶಿಕ್ಷಣ 2020 ಎರಡು ದಿನಗಳ ಸಮಾಜ ಕಾರ್ಯ ಪಠ್ಯಕ್ರಮ ರಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕ್ಯಾಬಿನೆಟ್ ನಲ್ಲಿ ಅನುಮತಿ ಪಡೆದಿದೆ. 35 ವರ್ಷಗಳ ನಂತರ ಹೊಸ ಪಾಲಿಸಿ ದೇಶದಲ್ಲಿ ಜಾರಿಗೆ ಬರುತ್ತಿದೆ.‌ ಒಂದು ವರ್ಷದಿಂದ ಪಾಲಿಸಿ ಬಗ್ಗೆ ಚರ್ಚೆ ಆಗುತ್ತಿದೆ. ಬರಿ ಪಠ್ಯ ಬದಲಾವಣೆಯ ಅಲ್ಲ. ಇಡೀ ಮಕ್ಕಳ ಸಮಗ್ರ ವ್ಯಕ್ತಿ ತ್ವ ಬದಲಾವಣೆಗೆ ಇದು ಪೂರಕವಾಗಿದೆ ಎಂದರು.

ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಕೌಶಲ್ಯ ಹಾಗೂ ಬಹು ಶಿಸ್ತೀಯ ವಿಷಯ ಪರಿಣಿತಿಗೂ ಅವಕಾಶ ಕಲ್ಪಿಸುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಮಕ್ಕಳ ಕಲಿಯಬೇಕಿದೆ ಎಂದರು.

ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ನಾಯಕತ್ವ ಗುಣವನ್ನು ಹೊಸ ಪಾಲಿಸಿ ಮಕ್ಕಳಲ್ಲಿ ಬೆಳೆಸಲಿದ್ದು, ರಾಷ್ಟ್ರೀಯ ಶಿಕ್ಷಣ‌ನೀತಿ ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ನಿಜಕ್ಕೂ ಹೆಗ್ಗಳಿಕೆ ವಿಚಾರ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಿಸಿ ಸಹಕಾರಿಯಾಗಿದೆ. ಶೈಕ್ಷಣಿಕ ವಲಯದಲ್ಲಿ ಅಷ್ಟೇ ಅಲ್ಲದೆ ಇಡೀ ಶಿಕ್ಷಣ ವ್ಯವಸ್ಥೆ ಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಇದು ಉಂಟು ಮಾಡಲಿದೆ. ಈ ನಿಟ್ಟಿನಲ್ಲಿ ಸಮಾಜ ಕಾರ್ಯ ವಿಭಾಗ ಒಂದೊಳ್ಳೆ ಕಾರ್ಯಾಗಾರವನ್ನು ಆಯೋಜಿಸಿದೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ, ಪಠ್ಯಕ್ರಮ ರಚನಾ ಸಮಿತಿ ಅಧ್ಯಕ್ಷ ಹಾಗೂ ಕುಲಸಚಿವ ಪ್ರೊ.ಆರ್.ಶಿವಪ್ಪ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಚಂದ್ರಮೌಳಿ, ಕಾರ್ಯಾಗಾರ ಸಂಯೋಜಕರಾದ ಡಾ.ಜ್ಯೋತಿ ಎಚ್.ಪಿ. ಸೇರಿದಂತೆ ಇತರರು ಹಾಜರಿದ್ದರು.

ENGLISH SUMMARY….

NEP curriculum ready: UoM VC
Mysuru, August 28, 2021 (www.justkannada.in): “The new National Education Policy is capable of identifying the challenges in the society and provide required knowledge and skills to the students. The first phase of curriculum is ready,” opined Prof. G. Hemanth Kumar, Vice-Chancellor, University of Mysore.
He participated in the two-day workshop on the ‘Preparation of Sociology curriculum,’ organized by the Department of Social Sciences, held at the Manasagangotri campus today.
In his address, he said, “the NEP has been approved in the cabinet. The people of the country are getting a new education policy after 35 years. It is not just a change of curriculum. It has been developed and is relevant in bringing overall change among the children. It will enhance the creativity, and innovation among the students, besides providing an opportunity to inculcate required skills and expertise in multidiscipline. Mother tongue cannot be neglected in this new NEP. Students have to learn Kannada compulsorily,” he explained.
Prof. Y.S. Siddegowda, Vice-Chancellor, Tumakuru University, Prof. R. Shivappa, Chairman, Curriculum Development Committee and Registrar, University of Mysore, Dr. Chandramouli, Assistant Professor, Department of Research in Social works, Dr. Jyothi, Coordinator of the workshop, and others were present.
Keywords: University of Mysore/ Prof. G. Hemanth Kumar/ Workshop/ new National Education policy

Key words: National Education Policy -course –ready-Mysore university-VC- Prof G.Hemanth Kumar