ಸುಮಲತಾ ಅಂಬರೀಶ್ ಪಾಲಿಗೆ ಮುಳುವಾದ ‘ಸುಮಲತೆಯರು’: ಗಮನಾರ್ಹ ಮತ ಗಳಿಕೆ

ಮಂಡ್ಯ, ಮೇ 23, 2019 (www.justkannada.in): ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಲಹ ಮೂಡಿಸುತ್ತಿದೆ.

ಒಂದು ಸುತ್ತಿನಲ್ಲಿ ಸುಮಲತಾ ಮುನ್ನಡೆ ಸಾಧಿಸಿದರೆ ಮತ್ತೊಂದು ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸುತ್ತಿದ್ದಾರೆ.

ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಸುಮಲತಾ ಹೆಸರಿನ ಇನ್ನು ಮೂವರು ಅಭ್ಯರ್ಥಿಗಳು ಒಂದಷ್ಟು ಮತಗಳನ್ನು ಪಡೆಯುತ್ತಿರುವುದು ಈ ವಿಷಯವನ್ನು ಸ್ಪಷ್ಟ ಪಡಿಸಿದೆ. ಇತ್ತೀಚಿನ ವರದಿಗಳು ಬಂದಾಗ ಕ್ರಮ ಸಂಖ್ಯೆ 19ರ ಸುಮಲತಾ 619, ಕ್ರಮ ಸಂಖ್ಯೆ 21ರ ಸುಮಲತಾ 548 ಹಾಗೂ ಕ್ರಮ ಸಂಖ್ಯೆ 22ರ ಸುಮಲತಾ 200 ಮತ ಗಳಿಸಿದ್ದಾರೆ. ಈ ಮೂಲಕ ಈ ಮೂವರು ಸುಮಲತಾ ಅಂಬರೀಶ್ ಪಾಲಿಗೆ ಮುಳುವಾಗುತ್ತಿದ್ದಾರೆ.