Friday, August 14, 2026

BDA Apartments

Home Front Page ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ- ಯತೀಂದ್ರ ವಿರುದ್ದ ಸಿ.ಟಿ ರವಿ ವಾಗ್ದಾಳಿ.

ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ- ಯತೀಂದ್ರ ವಿರುದ್ದ ಸಿ.ಟಿ ರವಿ ವಾಗ್ದಾಳಿ.

ಬೆಗಳೂರು,ಮಾರ್ಚ್,29,2024 (www.justkannada.in):  ಅಮಿತ್ ಶಾ ಗೂಂಡಾ, ರೌಡಿ ಎಂದು ಟೀಕಿಸಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಸಿ.ಟಿ ರವಿ, ಅಪ್ಪನ ಹೆಸರಿನ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ.  ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರಾ.  1982ರಲ್ಲೇ ಅಮಿತ್ ಶಾ ಬೂತ್ ಅಧ್ಯಕ್ಷರಾಗಿದ್ದರು.  ಆಗ ಇವರಪ್ಪ ಎಂಎಲ್ ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕರಾದವರು ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದವು . ಆಗಲೂ ನಮ್ಮ ಮೇಲೂ ಗೂಂಡಾ ಆಕ್ಟ್ ಹಾಕಿದ್ರು ಹಾಗಾದ್ರೆ ನಾವು ಗೂಂಡಾಗಳಾ..? ಎಂದು ಪ್ರಶ್ಮಿಸಿದರು.

ಯತೀಂದ್ರ ಅವರು ಅರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂತವರಿಗೆ ಬಡವರ ಕಷ್ಟ ಕಾಣಿಸುತ್ತಾ..?  ಚುನಾವಣೆ ಮುಗಿದ ಮೇಳೆ ಇವರೆಲ್ಲಾ ಎಲ್ಲಿರುತ್ತಾರೋ..? ಎಂದು ಸಿಟಿ ರವಿ ಕಿಡಿಕಾರಿದರು.

Key words: Yatindra ,  former Minister, CT Ravi,