Tuesday, September 29, 2026

BDA Apartments

ಮೆರವಣಿಗೆ ವಿಚಾರ: ಹಿಂದೂ ಜಾಗರಣ ವೇದಿಕೆಗೆ ಹೈಕೋರ್ಟ್ ಚಾಟಿ BDA JK_Adv BDA Adv
Home Front Page ಮೆರವಣಿಗೆ ವಿಚಾರ: ಹಿಂದೂ ಜಾಗರಣ ವೇದಿಕೆಗೆ ಹೈಕೋರ್ಟ್ ಚಾಟಿ

ಮೆರವಣಿಗೆ ವಿಚಾರ: ಹಿಂದೂ ಜಾಗರಣ ವೇದಿಕೆಗೆ ಹೈಕೋರ್ಟ್ ಚಾಟಿ

ಮೈಸೂರು,ಆಗಸ್ಟ್,14,2026 (www.justkannada.in):  ನ್ಯಾಯಾಲಯದ ಅನುಮತಿ ದೊರೆಯುವ ಮುನ್ನವೇ ಮೆರವಣಿಗೆ ಉದ್ದೇಶಿತ ಸ್ಥಳದಲ್ಲಿ ಜಾಹೀರಾತು ಫಲಕ ಅಳವಡಿಸಿರುವುದಕ್ಕೆ ಹಿಂದೂ ಜಾಗರಣ ವೇದಿಕೆಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮೈಸೂರು ಪೊಲೀಸರ ಅನುಮತಿ ನಿರಾಕರಣೆಯನ್ನು ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಏಕಸದಸ್ಯ ಪೀಠ, ಸರ್ಕಾರ ಸಲ್ಲಿಸಿದ ಜಾಹೀರಾತು ಫಲಕದ ಛಾಯಾಚಿತ್ರಗಳನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿತು.

ಸರ್ಕಾರದ ಪರ ಹೆಚ್ಚುವರಿ ಅಡ್ವಕೇಟ್ ಜನರಲ್ ವಿ.ಜಿ. ಭಾನುಪ್ರಕಾಶ್, ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೇ ಫಲಕ ಅಳವಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.ಮೆರವಣಿಗೆ ವಿಚಾರ high court

ಇದಕ್ಕೆ ಗರಂ ಆದ ನ್ಯಾಯಪೀಠ, ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಇಂತಹ ಕ್ರಮ ಕೈಗೊಳ್ಳುವುದು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ಹಾಗೂ ಮಿತಿಮೀರಿದ ನಡೆ ಎಂದು ಕಟುವಾಗಿ ಪ್ರಶ್ನಿಸಿತು.

ಮೆರವಣಿಗೆಗೆ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದಾಗ, ಮೆರವಣಿಗೆ ಆಯೋಜಿಸಿರುವವರು ಭದ್ರತಾ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.ಹಿಂದೂ ಜಾಗರಣ ವೇದಿಕೆಗೆ ಹೈಕೋರ್ಟ್ ಚಾಟಿ jk02_new jk02 new

ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಕನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪಂಜಿನ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ‘ಅಖಂಡ ಭಾರತ ಕಲ್ಪನಾ ದಿವಸ್’ ಆಚರಿಸಲು ಹಿಂದೂ ಜಾಗರಣ ವೇದಿಕೆ ಉದ್ದೇಶಿಸಿತ್ತು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

Key words: Procession, issue, High Court, Hindu Jagarana Vedika