ಬೆಂಗಳೂರಿನ ಗಲಭೆ ಪ್ರದೇಶದಲ್ಲಿ ನಮಾಜ್ ಗೆ ನಿರ್ಬಂಧ…

ಬೆಂಗಳೂರು,ಆ,14,2020(www.justkannada.in): ಗಲಭೆ ಉಂಟಾಗಿದ್ದ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರದೇಶದಲ್ಲಿ ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ನಮಾಜ್ ಗೆ  ನಿರ್ಬಂಧ ವಿಧಿಸಲಾಗಿದೆ.jk-logo-justkannada-logo

ಗಲಭೆ ಪ್ರದೇಶದಲ್ಲಿರುವ  ಮಸೀದಿಗಳಲ್ಲಿ ಮೌಲ್ವಿಗೆ ಮಾತ್ರವೇ ನಮಾಜ್ ಮಾಡಲು ಅವಕಾಶ ನೀಡಿ, ನಿರ್ಬಂಧ ವಿಧಿಸಿದೆ. ಈ ಸಂಬಂಧ ಗಲಭೆ ಪ್ರದೇಶದಲ್ಲಿ ನಿರ್ಬಂಧ ವಿಧಿಸಲಾಗಿದೆ. ಮಸೀದಿಗಳಲ್ಲಿ ಮೌಲ್ವಿಗೆ ಮಾತ್ರವೇ ನಮಾಜ್ ಮಾಡಲು ಅವಕಾಶ ನೀಡಿ. ಮನೆಯಲ್ಲೇ ನಮಾಜ್ ಮಾಡುವಂತೆ ಜನರಲ್ಲಿ ಮನವರಿಕೆ ಮಾಡಿ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸೂಚನೆ ನೀಡಿದ್ದಾರೆ.

ಹಾಗೆಯೇ ಮಸೀದಿಗಳಲ್ಲಿ ಜನ ಸೇರಲು ಅವಕಾಶವಿಲ್ಲ. ಯಾರೂ ಗುಂಪುಗೂಡದಂತೆ ಕಟ್ಟಚ್ಚರ ವಹಿಸಿ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ ಎಂದು ಡಿಸಿಪಿ ಶರಣಪ್ಪ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ನಂತ್ರ ಸೂಕ್ಷ್ಮ ಪ್ರದೇಶವಾಗಿದ್ದು ಈ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

Key words: Namaz – Restriction-Bengaluru -riot -area