ವಿವಾದಿತ ಪೋಸ್ಟ್ ಹಾಕಿದ್ದು ನಾನೇ- ತಪ್ಪೊಪ್ಪಿಕೊಂಡ ಆರೋಪಿ ನವೀನ್…

ಬೆಂಗಳೂರು,ಆ,14,2020(www.justkannada.in):  ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧ ಫೇಸ್ ಬುಕ್ ನಲ್ಲಿ  ವಿವಾದಾತ್ಮಕ ಪೋಸ್ಟ್  ಹಾಕಿದ್ದು ನಾನೇ ಎಂದು ಆರೋಪಿ ನವೀನ್​ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.jk-logo-justkannada-logo

ಈ ಕುರಿತು ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ನವೀನ್, ವಿವಾದಿತ ಪೋಸ್ಟ್ ಹಾಕಿದ್ದು ನಾನೇ.  ಕಮೆಂಟ್ ಮಾಡಿ ಪೋಸ್ಟ್ ಹಾಕಿದ್ದು ನಾನೇ. ರಾತ್ರಿ 7 ಗಂಟೆಗೆ ಹಾಕಿ 8 ಗಂಟೆಗೆ ಡಿಲೀಟ್ ಮಾಡಿದೆ. ಆದರೆ ಹೀಗೆಲ್ಲಾ ಆಗುತ್ತೆ ಎಂದು ಗೊತ್ತಾಗಲಿಲ್ಲ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಶಾಸಕ ಅಖಂಡ ಶ್ರೀನಿವಾಸ್​ ಅಕ್ಕನ ಮಗನಾಗಿರುವ ಆರೋಪಿ ನವೀನ್​ ಸಾಮಾಜಿಕ ಜಾಲತಾಣಗಳಲ್ಲಿ  ಮೊಹಮ್ಮದ್ ಪೈಗಂಬರ್  ಕುರಿತು ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಗಲಭೆಗಳು  ನಡೆದು ಕಿಡಿಗೇಡಿಗಳು ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದ್ದರು.dj halli- kj hallii- roit- Naveen -accused - controversial post.

ಈ ಮೊದಲು ಮೊಬೈಲ್​ ಫೋನ್​ ಕಳೆದುಹೋಗಿದೆ ಹಾಗೂ ಫೇಸ್​ಬುಕ್​ ಹ್ಯಾಕ್​ ಆಗಿದೆ ಎಂದು ನವೀನ್​ ಹೇಳಿಕೆ ನೀಡಿದ್ದ. ಇದೀಗ ತಪ್ಪೊಪ್ಪಿಕೊಂಡಿರುವ ನವೀನ್​, ಫೇಸ್​ಬುಕ್​ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದು ನಾನೇ ಎಂದು ಹೇಳಿದ್ದಾನೆ.

Key words: dj halli- kj hallii- roit- Naveen -accused – controversial post.