7 ವರ್ಷದ ಪುಟ್ಟಬಾಲಕಿಯ ಹೆಲಿಕಾಪ್ಟರ್ ಶಾಟ್ ಗೆ ಎಲ್ಲರೂ ಫೀದಾ…

ಮುಂಬೈ,ಆ,14,2020(www.justkannada.in): ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯಂತೆ ಏಳು ವರ್ಷದ ಬಾಲಕಿಯೊಬ್ಬಳು  ಹೆಲಿಕಾಪ್ಟರ್ ಶಾಟ್ ಹೊಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ.

ಪರಿ ಶರ್ಮಾ ಎನ್ನುವ ಪುಟ್ಟ ಬಾಲಕಿ ಮಹೇಂದ್ರ ಸಿಂಗ್ ಧೋನಿಯಂತೆ ಬ್ಯಾಟ್ ಹಿಡಿದು ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಾಳೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಶೇರ್ ಮಾಡಿದ್ದು,  ಪರಿ ಶರ್ಮಾ ಸೂಪರ್ ಟಾಲೆಂಟ್​ಯಿರುವ ಬಾಲಕಿ ಎಂದು ಅವರು ಹೊಗಳಿದ್ದಾರೆ.helicopter shot 7-year-oldgirl  

ಚೋಪ್ರಾ ಶೇರ್ ಮಾಡಿರುವ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು, ಪರಿ ಮುಂದಿನ ಜ್ಯೂನಿಯರ್ ಎಮ್​ಎಸ್ ಧೋನಿ ಅಂತಾ ಟ್ವೀಟ್ ಮಾಡುತ್ತಿದ್ದು, ಬಾಲಕಿಯ ಹೆಲಿಕಾಪ್ಟರ್ ಶಾಟ್ ಗೆ ಎಲ್ಲರೂ ಫಿದಾ ಆಗಿದ್ದಾರೆ.