ಕಾಂಗ್ರೆಸ್ ಬ್ಯಾನ್ ಮಾಡಬೇಕು ಎಂದ ನಳೀನ್ ಕುಮಾರ್ ಕಟೀಲ್ ಗೆ ಟಾಂಗ್ ಕೊಟ್ಟ ಬಿ.ಕೆ ಹರಿಪ್ರಸಾದ್.

ಮೈಸೂರು,ಸೆಪ್ಟಂಬರ್,29,2022(www.justkannada.in):  ಮೊದಲು ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಬೇಕು ಎಂದು ಹೇಳಿಕೆ ನೀಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿ.ಕೆ  ಹರಿಪ್ರಸಾದ್,  ನಳೀನ್ ಕಟೀಲು ಮಂಪರು ಪರೀಕ್ಷೆ ಮಾಡಬೇಕು. ಮಂಗಳೂರಿನಲ್ಲಿ ಯಾರ ಜತೆ ಪಿಎಫ್ ಐ ಸಂಬಂಧ ಇದೆ  ಎಂದು ಗೊತ್ತಾಗುತ್ತೆ.  ಚುನಾವಣೆ ವೇಳೆ ಮೋದಿಗೆ ಜೀವ ಬೆದರಿಕೆ ವಿಚಾರ ಹೊರ ಬರುತ್ತೆ ಎಂದರು.

ಇನ್ನು ಲೂಟಿ ರವಿಯ ಟೀಕೆಗಳಿಗೂ ನಾವು ಉತ್ತರಿಸುವ ಅಗತ್ಯವಿಲ್ಲ ಎಂದು ಬಿಕೆ ಹರಿಪ್ರಸಾದ್ ಟಾಂಗ್ ನೀಡಿದರು.

key words: Nalin kumar katil-mysore-congress-BK Hariprasad