Wednesday, August 19, 2026

BDA Apartments

Home Front Page ಎಲ್ಲಾ ಮಹಿಳೆಯರು ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹರು- ಸುಪ್ರೀಂಕೋರ್ಟ್ ಮಹತ್ವದ ಆದೇಶ.

ಎಲ್ಲಾ ಮಹಿಳೆಯರು ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹರು- ಸುಪ್ರೀಂಕೋರ್ಟ್ ಮಹತ್ವದ ಆದೇಶ.

ನವದೆಹಲಿ,ಸೆಪ್ಟಂಬರ್,29,2022(www.justkannada.in): ಎಲ್ಲಾ ಮಹಿಳೆಯರು ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್ ಜಸ್ಟಿಸ್ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಹೇಳಿದೆ. ಮಹಿಳೆಯರು ಗರ್ಭಪಾತ ಹಕ್ಕು ಹೊಂದಿದ್ದಾರೆ ವಿವಾಹಿತ, ಅವಿವಾಹಿತ ಮಹಿಳೆಯರು ಹಕ್ಕು ಹೊಂದಿದ್ದಾರೆ.  ಗರ್ಭಪಾತದ ಬಗ್ಗೆ ಅವರ ವೈಯಕ್ತಿಕ ತೀರ್ಮಾನ ಅಂತಿಮವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಗರ್ಭಪಾತ ವಿಚಾರದಲ್ಲಿ 3ನೇ ವ್ಯಕ್ತಿ ಹಸ್ತಕ್ಷೇಪ  ಇರಬಾರದು ಈ ವಿಚಾರದಲ್ಲಿ ಮಹಿಳೆ ನಿರ್ಧಾರವೇ ಅಂತಿಮ. ವಿವಾಹಿತ ಅವಿವಾಹಿತರ ನಡುವೆ ವ್ಯತ್ಯಾಸ ಮಾಡುವ ಆಗಿಲ್ಲ. ಮಹಿಳೆಯರ ನಡುವೆ ವ್ಯತ್ಯಾಸ ಮಾಡುವ ಆಗಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Key words: All –Women-Deserve- Legal -Abortion – Supreme Court