ನ.11 ರಂದು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ: ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ.

0
3

ಬೆಂಗಳೂರು,ಅಕ್ಟೋಬರ್,21,2022(www.justkannada.in):  ನವೆಂಬರ್ 11 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂದು ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ದೊರೆಯಿತು.

ಇಂದಿನಿಂದ ನವೆಂಬರ್ 7 ರವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ ನಡೆಯಲಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೆಲವರು ಕೆಂಪೇಗೌಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.  ಅವರೇನು ಚಕ್ರವರ್ತಿನಾ ಅವರಿಗ್ಯಾಕೆ ಅಷ್ಟು ಮಹತ್ವ ಅಂತಾರೆ . ಕೆಂಪೇಗೌಡರು ಎಷ್ಟು ದೊಡ್ಡವರು ಅನ್ನೋದು ಮುಖ್ಯ ಅಲ್ಲ. ಅವರು ಎಂತಹ ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ. ಕೆಂಪೇಗೌಡರಿಂದ ಈ ಬೆಂಗಳೂರು ಸೃಷ್ಠಿಯಾಗಿರುವುದು. ಹಲವು ಸರ್ಕಾರ ಬಂದು ಹೋದರೂ ಕೆಂಪೇಗೌಡರಿಗೆ ಗೌರವ ಸಿಕ್ಕಿಲ್ಲ. ಬಿಎಸ್ ವೈ ಮತ್ತು ಸಿಎಂ ಬೊಮ್ಮಾಯಿ ಕೆಂಪೇಗೌಡರಿಗೆ ಗೌರವ ಸೂಚಿಸಿದ್ದಾರೆ ಎಂದರು.

Key words: Nadaprabhu Kempegowda- statue – November 11.