Saturday, October 3, 2026

BDA Apartments

Home Front Page ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

 

ನಾಗೋಯಾ,OCT.03,2026: ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಗಾಲ್ಫ್ ಆಟಗಾರ್ತಿ ಪ್ರಣವಿ ಅರಸ್‌  ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು, ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ಗಾಲ್ಫ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಪಾನ್‌ನ ಕಸುгай ಕಂಟ್ರಿ ಕ್ಲಬ್‌ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಣವಿ 70 ಸ್ಟ್ರೋಕ್‌ಗಳ ಈವನ್ ಪಾರ್ ಪ್ರದರ್ಶನ ನೀಡಿದರು. ನಾಲ್ಕು ಸುತ್ತುಗಳ ಒಟ್ಟು 15-ಅಂಡರ್ 265 ಸ್ಕೋರ್‌ನೊಂದಿಗೆ ಮುನ್ನಡೆ ಕಾಯ್ದುಕೊಂಡು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರಿಗಿಂತ ಒಂದು ಸ್ಟ್ರೋಕ್‌ ಹಿಂದೆ ಚೀನಾ ಮತ್ತು ಸಿಂಗಾಪುರದ ಆಟಗಾರ್ತಿಯರು ಉಳಿದರು.

Pranavi Urs jk02_new jk02 new

ಅಂತಿಮ ಸುತ್ತಿನ ಮೂರನೇ ಹೋಲ್‌ನಲ್ಲಿ ಟ್ರಿಪಲ್ ಬೋಗಿ ಎದುರಾದ ಕಾರಣ ಪ್ರಣವಿ ಅವರ ಮೂರು ಸ್ಟ್ರೋಕ್‌ಗಳ ಮುನ್ನಡೆ ಕಳೆದುಹೋಗಿತ್ತು. ಆದರೆ ಬಳಿಕ ಮೂರು ಬರ್ಡಿಗಳನ್ನು ದಾಖಲಿಸಿ ಅದ್ಭುತವಾಗಿ ಪುಟಿದೆದ್ದ ಅವರು, ನಿರ್ಣಾಯಕ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿ ಐತಿಹಾಸಿಕ ಚಿನ್ನವನ್ನು ತಮ್ಮದಾಗಿಸಿಕೊಂಡರು.

ತಂಡಕ್ಕೂ ಬೆಳ್ಳಿ:

ಪ್ರಣವಿ ಅವರೊಂದಿಗೆ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಒಳಗೊಂಡ ಭಾರತೀಯ ಮಹಿಳಾ ಗಾಲ್ಫ್ ತಂಡವೂ ಬೆಳ್ಳಿ ಪದಕ ಗೆದ್ದಿದೆ. ಭಾರತ ತಂಡ ಒಟ್ಟು 14-ಅಂಡರ್ 546 ಸ್ಕೋರ್ ದಾಖಲಿಸಿ ಎರಡನೇ ಸ್ಥಾನ ಪಡೆದರೆ, ಚೀನಾ 22-ಅಂಡರ್ 538 ಸ್ಕೋರ್‌ನೊಂದಿಗೆ ಚಿನ್ನ ಗೆದ್ದಿತು.

ಈ ಮೂಲಕ ಪ್ರಣವಿ ಒಂದೇ ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ಚಿನ್ನ ಹಾಗೂ ತಂಡದ ಬೆಳ್ಳಿ ಗೆದ್ದ ಅಪರೂಪದ ಸಾಧನೆ ಮಾಡಿದ್ದಾರೆ. ಪ್ರಣವಿ ಅವರ ಚಿನ್ನವು ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತದ 24 ವರ್ಷಗಳ ಬಳಿಕದ ಚಿನ್ನವೂ ಆಗಿದೆ. 2002ರಲ್ಲಿ ಶಿವ್ ಕಪೂರ್ ಪುರುಷರ ವೈಯಕ್ತಿಕ ಗಾಲ್ಫ್ ಚಿನ್ನ ಗೆದ್ದ ನಂತರ ಭಾರತಕ್ಕೆ ಗಾಲ್ಫ್‌ನಲ್ಲಿ ಮತ್ತೊಂದು ಚಿನ್ನ ದೊರೆತಿದೆ.

ಮೈಸೂರಿನ 23 ವರ್ಷದ ಪ್ರಣವಿ ಅರಸ್‌  ಅವರ ಈ ಸಾಧನೆ ಭಾರತೀಯ ಮಹಿಳಾ ಗಾಲ್ಫ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

KEY WORDS: 

Pranavi Urs, Pranavi Urs Asian Games, Mysuru golfer Pranavi Urs, Asian Games 2026, golf India, women’s golf gold, Pranavi Urs gold medal, Asian Games golf, gold medal, Mysuru sports news

Pranavi Urs GOLF

English Summary
Title

Mysuru Golfer Pranavi Urs Makes History with Gold at Asian Games

Short Description
Mysuru golfer Pranavi Urs has made history at the Asian Games by winning the women’s individual golf gold medal, becoming the first Indian woman to win individual golf gold at the Asian Games. At Kasumigaseki Country Club in Japan, Pranavi shot an even-par 70 in the final round to finish with a 15-under 265 total after four rounds. She held on to win gold, finishing one stroke ahead of golfers from China and Singapore.
Keywords
Pranavi Urs, Pranavi Urs Asian Games, Mysuru golfer Pranavi Urs, Asian Games 2026, golf India, women’s golf gold, Pranavi Urs gold medal, Asian Games golf, gold medal, Mysuru sports news