Saturday, October 3, 2026

BDA Apartments

Home Front Page ಫಾರ್ಮ್ 7 ಹೆಸರಲ್ಲಿ ಅತಿದೊಡ್ಡ ಸ್ಕ್ಯಾಮ್ : ಪುರಾವೆ ನೀಡುತ್ತೇವೆ-ಡಿಸಿಎಂ ಪರಮೇಶ್ವರ್

ಫಾರ್ಮ್ 7 ಹೆಸರಲ್ಲಿ ಅತಿದೊಡ್ಡ ಸ್ಕ್ಯಾಮ್ : ಪುರಾವೆ ನೀಡುತ್ತೇವೆ-ಡಿಸಿಎಂ ಪರಮೇಶ್ವರ್

ಬೆಂಗಳೂರು,ಅಕ್ಟೋಬರ್,3,2026 (www.justkannda.in): ಫಾರ್ಮ್ 7 ಹೆಸರಲ್ಲಿ ಅತಿದೊಡ್ಡ ಸ್ಕ್ಯಾಮ್  ನಡೆದಿದೆ. ಬಿ.ವೈ ವಿಜಯೇಂದ್ರ ಕೇಳಿದ್ದಕ್ಕೆ ಪುರಾವೆಗಳನ್ನ ನಾವು ನೀಡುತ್ತೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಇಲ್ಲಿ ನಡೆದಿರುವುದು ಒಂದು ದೊಡ್ಡ ರೀತಿಯ ಸ್ಕ್ಯಾಮ್ .  ಅಷ್ಟು ದೊ ಡ್ಡ ಮೊತ್ತದಲ್ಲಿ ಪೇಪರ್ ಪ್ರಿಂಟ್ ಆಗಿದ್ದೇಲ್ಲಿ? ಒಂದೊಂದು ಬಂಡಲ್ ನಲ್ಲಿ 50 ರಿಂದ60 ಜನರ ಹೆಸರುಗಳಿವೆ.  ಒಂದೊಂದು ಸಮುದಾಯದ 50 ರಿಂದ 60 ಜನರ ಹೆಸರುಗಳಿವೆ ಇದರ ಹಿಂದೆ ತುಂಬಾ ವಿಚಾರಗಳಿವೆ.  ವಿಜಯೇಂದ್ರ ಕೇಳಿದ್ದಕ್ಕೆ ಪುರಾವೆಗಳನ್ನ ನಾವು ನೀಡುತ್ತೇವೆ ಸಂಬಂಧ ಪಟ್ಟ ಏಜೆನ್ಸಿಗಳ ಮುಂದೆ ದಾಖಲೆ ಬಿಚ್ಚಿಡಲಿದ್ದೇವೆ ಎಂದು ತಿಳಿಸಿದರು.Massive scam parameshwar

ಆಯೋಗದ ಮುಂದೆ ಕಾಂಗ್ರೆಸ್ ನಾಯಕರು ಧರಣಿ ಮಾಡಿದ್ದಕ್ಕೆ ಎಫ್ ಐಆರ್ ಗೆ ಬಿಜೆಪಿ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಯವರು ಸರಿಯಾಗಿ ಅರ್ಥ ಮಾಢಿಕೊಂಡಿಲ್ಲ.  ಆಯೋಗದ ಕಚೇರಿಗ ಪ್ರತಿಭಟನೆ ಮಾಡಲು ಹೋಗಿರಲಿಲ್ಲ ನಾವು ಚುನಾವಣಾಧಿಕಾರಿಗೆ ಮನವಿ ಕೊಡಲು ಹೋಗಿದ್ದವು. ಆಯೋಗದವರು ನಮಗೆ ಸರಿಯಾಗಿ ಉತ್ತರ ಕೊಟ್ಟಿರಲಿಲ್ಲ. ಉತ್ತರಕೊಡದಿದ್ದಕ್ಕೆ ನಾವು ಅಲ್ಲೇ ಕುಳಿತುಕೊಂಡಿದ್ದವು. ನಮಗೂ ಕಾಮನ್ಸ್ ಸೆನ್ಸ್ ಇದೆ. ಅವರಿಗೆ ಮಾತ್ರ ಇರೋದಲ್ಲ ಸರ್ಕಾರ ನಡೆಸುವವರು ಯಾರಾದರೂ ಧರಣಿ ಮಾಡ್ತಾರಾ?  ಎಂದು ಪ್ರಶ್ನಿಸಿದರು.Massive scam jk02_new jk02 new

Key words: Massive scam, involving, Form 7, DCM, Parameshwara

English Summary
Title

Form 7 Scam: Congress Alleges Bulk Voter Deletion Plot in Karnataka

Short Description
Karnataka DCM G. Parameshwara and CM D.K. Shivakumar have alleged a massive voter fraud scam involving the illegal bulk submission of Form 7 applications. The ruling Congress party claims pre-printed forms are being used in a conspiracy to delete legitimate minority, Dalit, and poor voters from the electoral roll. Following a high-profile protest by Congress leaders outside the Chief Electoral Officer's office, the Election Commission of India (ECI) intervened. The CEO has ordered strict action and legal proceedings against fraudulent bulk applications during the ongoing Special Intensive Revision process.
Keywords
Massive scam, involving, Form 7, DCM, Parameshwara