Friday, August 14, 2026

BDA Apartments

Home Crime ಮೈಸೂರು: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು….

ಮೈಸೂರು: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು….

ಮೈಸೂರು,ಆ,2,2019(www.justkannada.in):  ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಜಯನಗರ ರೈಲ್ವೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಅಶೋಕಪುರಂ ನಿವಾಸಿ ಅರುಣ(22) ಮೃತಪಟ್ಟ ಯುವಕ. ಅರುಣ್ ನಿನ್ನೆ ರಾತ್ರಿ ಮನೆ ಬಿಟ್ಟಿದ್ದನು. ಈ ನಡುವೆ ಅರುಣ್ ಮನೆಗೆ ವಾಪಸ್ ಬಾರದ ಹಿನ್ನಲೆ ಪೋಷಕರು ಅಶೋಕಪುರಂ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ ಇಂದು ಬೆಳಿಗ್ಗೆ ರೈಲ್ವೆ ಟ್ರಾಕ್ ಬಳಿಕ  ಅರುಣ್ ಶವವಾಗಿ ಪತ್ತೆಯಾಗಿದ್ದಾನೆ. ಮೊಬೈಲ್ ನಲ್ಲಿ ಅಣ್ಣನ ಜತೆ  ಫೋನ್ ನಲ್ಲಿ ಮಾತನಾಡುತ್ತಾ ರೈಲಿಗೆ ಸಿಲುಕಿದ್ದಾನೆ ಎನ್ನಲಾಗಿದೆ.

ಬಿಕಾಂ ಮುಗಿಸಿದ್ದ ಅರುಣ್ ಗೆ ಕೆಲಸಕ್ಕೆ ಹೋಗುವಂತೆ ತಂದೆ ಶ್ರೀನಿವಾಸ್ ಬುದ್ದಿವಾದ ಹೇಳಿದ್ದರು. ಎನ್ನಲಾಗಿದೆ. ವಾಣಿವಿಲಾಸ ನೀರು ಸರಬರಾಜು ಇಲಾಖೆಯಲ್ಲಿ ಶ್ರೀನಿವಾಸ್ ನೌಕರರಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ  ಪರಿಶೀಲನೆ ನಡೆಸಿದ್ದಾರೆ.

Key words: Mysore-Youth- commits -suicide – train.