Thursday, September 24, 2026

BDA Apartments

Home Crime ಇನ್ಸ್ಟಾಗ್ರಾಮ್  ನಲ್ಲಿ ರೀಲ್ಸ್, ಯುವಕನ ಜೊತೆ ಲವ್ :  ಮೈಸೂರಿನ ಯುವತಿ ಅನುಮಾನಸ್ಪದ ಸಾವು

ಇನ್ಸ್ಟಾಗ್ರಾಮ್  ನಲ್ಲಿ ರೀಲ್ಸ್, ಯುವಕನ ಜೊತೆ ಲವ್ :  ಮೈಸೂರಿನ ಯುವತಿ ಅನುಮಾನಸ್ಪದ ಸಾವು

ಬೆಳಗಾವಿ,ಜುಲೈ,13,2024 (www.justkannada.in):  ಇನ್ಸ್ಟಾಗ್ರಾಮ್  ನಲ್ಲಿ ರೀಲ್ಸ್ ಮಾಡುತ್ತಾ, ಯುವಕನ ಜೊತೆ ಲವ್ ನಲ್ಲಿ ಬಿದ್ದು ಮದುವೆಯಾಗಿದ್ದ  ಮೈಸೂರು ಮೂಲದ ಯುವತಿ ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ 23 ವರ್ಷದ ಮಂಜುಳ ಅಲಿಯಾಸ್ ನಯನ ಮೃತಪಟ್ಟ ಯುವತಿ. ಈಕೆಗೆ ಇನ್ಸ್ಟಾಗ್ರಾಮ್  ನಲ್ಲಿ ರೀಲ್ಸ್ ಮಾಡುವ ಹುಚ್ಚಿತ್ತು. ಈ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದ ಬೀರೇಶ್ ಎಂಬುವವನ ಪರಿಚಯವಾಗಿ ಪ್ರೇಮಾಂಕುರವಾಗಿದೆ. ಈ ಹಿನ್ನೆಲೆಯಲ್ಲಿ ಮಂಜುಳ ಬೆಳಗಾವಿಗೆ ತೆರಳಿ ಒಂದು ವರ್ಷದ ಹಿಂದೆ ಬೀರೇಶ್ ನನ್ನು ವಿವಾಹವಾಗಿದ್ದಳು.

ಮೈಸೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಮಂಜುಳಾಳನ್ನ ಪುಸಲಾಯಿಸಿ ಬೀರೇಶ್ ಮದುವೆಯಾಗಿದ್ದ. ಈ ಮಧ್ಯೆ ಮಂಜುಳ 3 ತಿಂಗಳ ಗರ್ಭಿಣಿಯಾಗಿದ್ದು, ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಪತಿ ಬೀರೇಶ್ ಮತ್ತು ಕುಟುಂಬದವರೇ ಮಂಜುಳಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮಂಜುಳ ಪೋಷಕರು ಆರೋಪಿಸಿದ್ದಾರೆ.  3 ತಿಂಗಳ ಗರ್ಭೀಣಿಯಾಗಿದ್ದ ಆಕೆಗೆ ಗರ್ಭಫಾತ ಮಾಡಿಸಿಕೊಳ್ಳುವಂತೆ ಪತಿ ಬೀರೇಶ್ ಮತ್ತು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ . ಒಪ್ಪದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದಾರೆ. ಕೊಲೆ ಮಾಡಿ ಪತಿ ಬೋರೇಶ್,  ಕುಟುಂಬ ಪರಾರಿಯಾಗಿದ್ದಾರೆ ಎಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ.

Key words: Mysore , young woman, dies, suspiciously