ಮೈಸೂರು ವಿವಿ ಸ್ನಾತಕೋತ್ತರ ಕೋರ್ಸ್: ಭರ್ತಿಯಾಗದಿರುವ ಸೀಟುಗಳ ಪ್ರವೇಶಾತಿ ನೋಂದಣಿಗೆ ಸೂಚನೆ

ಮೈಸೂರು,ಫೆಬ್ರವರಿ,03,2021(www.justkannada.in) : ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗಳು ಮುಗಿದಿದ್ದು, ಭರ್ತಿಯಾಗದಿರುವ ಸೀಟುಗಳಿಗೆ ಅರ್ಜಿ ಸಲ್ಲಿಸುವಂತೆ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸೂಚಿಸಿದ್ದಾರೆ.jk

ಫೆ.3ರಿಂದ ಫೆಬ್ರವರಿ 6ವರೆಗೆ ಪ್ರವೇಶ ಪೋರ್ಟಲ್ ನಲ್ಲಿ ನೋಂದಣಿ

2020-21ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ, ಅಂತಿಮ ಅಧಿಸೂಚನೆಯಂತೆ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗಳು ಮುಗಿದಿದೆ. ಭರ್ತಿಯಾಗದ ಸೀಟುಗಳಿಗೆ ಫೆ.3ರಿಂದ ಫೆಬ್ರವರಿ 6ವರೆಗೆ ಪ್ರವೇಶ ಪೋರ್ಟಲ್ ನಲ್ಲಿ ನೋಂದಣಿಯಾಗಿ 1 ಸಾವಿರ ರೂ.ಗಳನ್ನು ಪಾವತಿಸಿ ಆಸಕ್ತ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ದಾರೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಮತ್ತೆ ಅರ್ಜಿ ಹಾಕುವ ಅವಶ್ಯಕತೆಯಿರುವುದಿಲ್ಲ. ಸ್ಕೀಮ್ ‘ಎ’ ಸೀಟುಗಳು ಖಾಲಿ ಉಳಿದು, ಸ್ಕೀಮ್ ಬಿ ಸೀಟುಗಳ ಪ್ರವೇಶಾತಿ ಆರಂಭವಾಗದಿದ್ದಲ್ಲಿ ಹಾಗೂ ಸ್ಕೀಮ್ ‘ಎ’ ಸೀಟುಗಳು ಭರ್ತಿಯಾಗದಿದ್ದಲ್ಲಿ, ಸ್ಕೀಮ್  ‘ಎ’ ನಲ್ಲಿಯೇ ಭರ್ತಿ ಮಾಡಿ, ನಂತರ ಸ್ಕೀಮ್ ‘ಬಿ’ ಸೀಟುಗಳ ಪ್ರವೇಶಾತಿ ಆರಂಭಿಸುವಂತೆ ಸೂಚಿಸಿದ್ದಾರೆ.  Mysore VV-Master's Course-Incomplete-seats-Accessibility-registration-NOTEಸ್ಕೀಮ್ ‘ಬಿ’ ಸೀಟುಗಳ ಪ್ರವೇಶಾತಿ ಆರಂಭವಾಗಿದ್ದರೆ, ಒಂದು ವೇಳೆ ಸ್ಕೀಮ್ ‘ಎ’ ಸೀಟುಗಳು ಖಾಲಿ ಉಳಿದಿದ್ದಲ್ಲಿ ಅವುಗಳನ್ನು ಸ್ಕೀಮ್ ‘ಬಿ’ ಗೆ ವರ್ಗಾವಣೆ ಮಾಡಿ, ಸ್ಕೀಮ್ ‘ಬಿ’ ಅಡಿಯಲ್ಲಿಯೇ ಪ್ರವೇಶಾತಿ ನೀಡಬಹುದು.Mysore VV-Master's Course-Incomplete-seats-Accessibility-registration-NOTE

ಸರ್ಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಮೆರಿಟ್ ಆಧಾರದ ಮೇಲೆ ವರ್ಗವಾರು 5 ಸಾವಿರ ರೂ.ಗಳನ್ನು ಪಾವತಿಸಿಕೊಂಡು ಪ್ರವೇಶಾತಿ ನೀಡುವುದು(ಎಸ್ಸಿ,ಎಸ್ಟಿ ವಿದ್ಯಾರ್ಥಿಗಳ ಪೋಷಕರ ಆದಾಯ 2.5ಲಕ್ಷ ರೂ.ಗಳಿಗಿಂತ ಕಡಿಮೆಯಿದ್ದಲ್ಲಿ ಶುಲ್ಕದಲ್ಲಿ ವಿನಾಯಿತಿ ನೀಡುವುದು) ಎಂದು ಆದೇಶ ಹೊರಡಿಸಲಾಗಿದೆ. ವಿಶ್ವವಿದ್ಯಾನಿಲಯದ ವಿವಿಧ ಅಧ್ಯಯನ ವಿಭಾಗಗಳು ಮತ್ತು ವಿದ್ಯಾರ್ಥಿಗಳಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.

key words : Mysore VV-Master’s Course-Incomplete-seats-Accessibility-registration-NOTE