ನಾನು ರಾಜಕೀಯದಲ್ಲಿರುವವರೆಗೂ ಜಿಟಿಡಿಯನ್ನ ಜೆಡಿಎಸ್ ಗೆ ಸೇರಿಸಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

ಮೈಸೂರು,ಫೆಬ್ರವರಿ,3,2021(www.justkannada.in):  ಜಿಟಿ ದೇವೇಗೌಡರು ಬೆಳಿಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್  ಸಂಜೆಯಾಗುತ್ತಲೇ ಬಿಜೆಪಿ ಕಡೆ ಹೋಗುತ್ತಾರೆ. ಕೊನೆಗೆ ಎಲ್ಲೂ ಗೀಟಲಿಲ್ಲ ಅಂದ್ರೆ ಮತ್ತೆ ಜೆಡಿಎಸ್ ಬಾಗಿಲಿಗೆ ಬರುತ್ತಾರೆ. ಅದು ಚೆನ್ನಾಗಿ ಗೊತ್ತು, ನಾನು ರಾಜಕೀಯದಲ್ಲಿ ಇರುವವರೆಗೂ ಮತ್ತೆ   ಜಿಟಿ ದೇವೇಗೌಡರನ್ನ ಪಕ್ಷಕ್ಕೆ ಸೇರಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.name -MLA -GT Deve Gowda -not - list – viewers-HD Kumaraswamy

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿ ಶಾಸಕ ಜಿ.ಟಿ ದೇವೇಗೌಡರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, : ಪ್ರತಿ ದಿನ ನಮಗೆ ಹೂ ಮುಡಿಸಲು ಆಗೋಲ್ಲ. ಇವರ ಪಕ್ಷ ನಿಷ್ಠೆ ಎಷ್ಟಿದೆ ಅಂತ ಕಾರ್ಯಕರ್ತರಿಗೆ ಗೊತ್ತಾಗಿದೆ. ಜಿಟಿಡಿ ಬಗ್ಗೆ ನಾವು ಏನನ್ನು ತೀರ್ಮಾನ ಮಾಡಿಲ್ಲ. ಅವರೇ ಹೇಳಿದ್ದರು. ಪಕ್ಷ ಸಂಘಟನೆಗೆ ಸಮಯ ಕೊಟ್ಟಿರಲಿಲ್ಲ ಅಂತ. ಈಗ ಸಚಿವ ಸ್ಥಾನ ಇಲ್ಲ ಅದಕ್ಕೆ ಕ್ಷೇತ್ರದ ಕೆಲಸ ಮಾಡ್ತಿದ್ದಾರೆ. ಮಾಡಿಕೊಂಡು ಇರಲಿ. ಅವರ ಬಗ್ಗೆ ನಾನೇನು ವ್ಯಂಗ್ಯ ಮಾಡುತ್ತಿಲ್ಲ. ಮೈದಾನ ದೊಡ್ಡದಾಗಿದೆ ಯಾರಾದರೂ ಕಾರ್ಯಕ್ರಮ ಮಾಡಬಹುದು. ಆದರೇ ಪ್ರತಿ ದಿನ ನಮಗೆ ಹೂ ಮುಡಿಸಲು ಆಗೋದಿಲ್ಲ ಎಂದು ಕಿಡಿಕಾರಿದರು.

ಸಾ.ರಾ ಮಹೇಶ್ ವಿರುದ್ದ ಸ್ಪರ್ಧಿಸಿದ್ದ ಅಭ್ಯರ್ಥಿ ಜೊತೆ ಮೆರವಣಿಗೆ ಹೋಗ್ತಾರೆ. ಹಾಗಾದ್ರೆ ಇವರಿಗೆ ಪಕ್ಷ ನಿಷ್ಟೆಎಷ್ಟಿದೆ  ಅಂತ ಕಾರ್ಯಕರ್ತರು ಮಾತನಾಡೋದಿಲ್ವಾ. ಅವರದ್ದೇ ದೊಡ್ಡ ಶಕ್ತಿ ಇದೆ. ಅವರು ಶಕ್ತಿ ಪ್ರದರ್ಶನ ಮಾಡಿಕೊಂಡು ಅವರ ದಾರಿಲಿ ಹೋಗಲಿ. ನಾವು ನಮ್ಮ ದಾರೀಲಿ  ಹೋಗುತ್ತೇವೆ ಎಂದು ಹರಿಹಾಯ್ದರು.

ಪಕ್ಷಕ್ಕಿಂತ ಬೆಳೆಯೋಕೆ ಅವರಿಗೂ ಆಗೋಲ್ಲ ನನಗೂ ಆಗೋಲ್ಲ

ನಾನು ಪಕ್ಷಕ್ಕಿಂತ ಬೆಳೆದಿದ್ದೇನೆ ಅಂತ ಜಿಟಿಡಿಯವರು ಅಂದುಕೊಂಡಿದ್ದಾರೆ. ಆದ್ರೆ ಪಕ್ಷಕ್ಕಿಂತ ಬೆಳೆಯೋಕೆ ಅವರಿಗೂ ಆಗೋಲ್ಲ ನನಗೂ ಆಗೋಲ್ಲ ಎಂದು  ನೇರವಾಗಿ ಟಾಂಗ್ ನೀಡಿದ  ಹೆಚ್.ಡಿ ಕುಮಾರಸ್ವಾಮಿ, ಕೆ.ಆರ್.ನಗರದಲ್ಲಿ ಸಹಕಾರಿ ಬ್ಯಾಂಕಿನ ಕಾರ್ಯಕ್ರಮ ಆಗಿದರೂ ಬ್ಯಾಂಕಿಗೆ ಸರ್ಕಾರದ ಶೇರು ಇರುತ್ತೆ. ಹಾಗಾದರೇ ಆ ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನ ನೀಡಬೇಕು. ಮೊನ್ನೆ ಶರತ್ ಬಚ್ಚೇಗೌಡರ ಕಾರ್ಯಕ್ರಮದ ಹಕ್ಕುಚ್ಯುತಿ ನೋಡಿಲ್ಲವೇ? ಅವರು ಬೆಳೆದಿದ್ದಿದ್ದಾರೆ ಅವರಿಲ್ಲಿದಿದ್ದರೆ ಜಿಲ್ಲೆಯ ರಾಜಕಾರಣವೇ ನಡೆಯೋಲ್ಲ. ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋಲ್ಲ. 2008ರಲ್ಲಿ ಏನಾಯ್ತು ಅಂತ ಗೊತ್ತಿಲ್ಲವೇ. ಡ್ಯಾಮೆಜ್ ಆಗಿದ್ದು ಪಕ್ಷಕ್ಕಲ್ಲ ಯಾರಿಗೆ ಡ್ಯಾಮೆಜ್ ಆಯ್ತು ಅಂತ ಇತಿಹಾಸ ಇದೆ ಎಂದು ಜಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಉಚ್ಚಾಟನೆ ಮಾಡ್ತೇನೆ ಅಂತ ಎಲ್ಲಿಯೂ ಹೇಳಿಲ್ಲ…..

ಜೆಡಿಎಸ್‌ನಿಂದ ಜಿಟಿ ದೇವೇಗೌಡರನ್ನ ಉಚ್ಚಾಟನೆ ಮಾಡುವ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಉಚ್ಚಾಟನೆ ಮಾಡುತ್ತೇನೆ ಅಂತ ಎಲ್ಲಿಯೂ ಹೇಳಿಲ್ಲ. ಉಚ್ಚಾಟನೆ ಮಾಡಿದರೇ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಆದರೇ ಮೈಸೂರು ಭಾಗದ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ‌ ಮಾಡ್ತಾರೆ. ನಾನು ಉಚ್ಚಾಟನೆ ಮಾಡಿದರೇ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಹೀಗಾಗಿ ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ಕ್ರಮ ತೆಗೆದುಕೊಳ್ಳುತ್ತೀನಿ ಎಂದರು.

mysore- GT devegowda- JDS-until I – politics- Former CM- HD Kumaraswamy
ಕೃಪೆ-INTERNET

ಪಕ್ಷದಲ್ಲಿ ಎಚ್ ಡಿ ದೇವೆಗೌಡರ ಹಿಡಿತ ಇಲ್ಲ. ಮಕ್ಕಳ ಮಾತಿಗೆ ತಲೆಯಾಡಿಸುವ ಪರಿಸ್ಥಿತಿಗೆ ತಂದಿದ್ದಾರೆ  ಎಂದು ಹೇಳಿಕೆ ನೀಡಿದ್ದ ಜಿ.ಟಿ ದೇವೇಗೌಡರಿಗೆ ಚಾಟಿ ಬೀಸಿದ ಹೆಚ್.ಡಿಕೆ, ನನ್ನ ತಂದೆಗೆ ಗೌರವ ಕೊಡುವುದನ್ನ ಇವರಿಂದ ಕಲಿಯಬೇಕಿಲ್ಲ. ನಮ್ಮ ಕುಟುಂಬದ ಬಗ್ಗೆ ಮಾತಾನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ಮಾತನಾಡಲಿ ಎಂದು ಜಿಟಿ.ದೇವೇಗೌಡರಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿ.ಟಿ.ದೇವೇಗೌಡರನ್ನ ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದ್ದೆ ನಾನು….

ಜಿ.ಟಿ.ದೇವೇಗೌಡರನ್ನ ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದ್ದೆ ನಾನು. ಆಗ ನಾನು ರಾಜಕಾರಣದಲ್ಲಿ ಇರಲಿಲ್ಲ. ಆದ್ರೂ ಮನೆಯಲ್ಲಿ ಮಲಗಿದ್ದ ಇವರನ್ನ ಕರೆದು ಸಹಕಾರ ಮಹಾಮಂಡಳಿ ಅಧ್ಯಕ್ಷರಾಗಿ ಮಾಡಿದ್ದವು. ಇವರು ಸಹಕಾರಿ ಕ್ಷೇತ್ರಕ್ಕೆ ಬರೋಕೆ ನನ್ನ ಪಾತ್ರವು ಇದೆ ಎಂದು ಜಿಟಿ ದೇವೇಗೌಡರಿಗೆ ಟಾಂಗ್ ನೀಡಿದರು.

ಜಿ.ಟಿ.ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ.

ಹಾಗೆಯೇ ಜಿಟಿಡಿ ವಿರುದ್ದ ವಾಗ್ದಾಳಿ ಮುಂದುವರೆಸಿದ ಹೆಚ್.ಡಿಕೆ, ಜಿ.ಟಿ.ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ. ತುಂಬಾ ದಿನ ಸುಳ್ಳು ಹೇಳಿಕೊಂಡು ತಿರುಗೋಕಾಗೋಲ್ಲ. ಸಾ.ರಾ.ಮಹೇಶ್‌ ರನ್ನ ನಾನು ಬೆಳೆಸಿದೆ ಅಂತ ಹೇಳಿದ್ದಾರೆ. ದೇವೇಗೌಡರ‌ ಜೊತೆ ಮಾತನಾಡಿದ್ದೇನೆ ಬೆಳಗ್ಗೆ ಮಂತ್ರಿಯಾಗ್ತಿಯಾ ಹೋಗು ಅಂತ ಹೇಳಿದ್ದರು. ಆದ್ರೆ ಯಾರ ಜೊತೆಯೂ ಅವರು ಮಾತುಕತೆ ನಡೆಸಿರಲಿಲ್ಲ. ಸಾ.ರಾ.ಮಹೇಶ್‌ರನ್ನ ಮಂತ್ರಿ ಮಾಡಿದವನು ನಾನು ಇವರಲ್ಲ. ಮಹಾನ್ ಸುಳ್ಳುಗಾರ ಈ ಜಿಟಿಡಿ. ಆದ್ರೆ ಹೆಚ್ಚು ದಿನ ಸುಳ್ಳು ಹೇಳಿಕೊಂಡು ತಿರುಗಾಡೋಕೆ ಆಗೋಲ್ಲ ಎಂದು ಕಿಡಿಕಾರಿದರು.

ನಾನು ಸಿಎಂ ಆಗಲು ಜಿಟಿಡಿ ಒಂದು ವೋಟು ಹಾಕಿದ್ದರು. ಅದಕ್ಕಾಗಿ ಅವರಿಗೆ ನಾನು ಮಂತ್ರಿ ಮಾಡಿದ್ದೇನೆ‌. ನಾನೇನು ಒಬ್ಬನೆ ಮಂತ್ರಿ ಆಗಿ ಅನುಭವಿಸಿಲ್ಲ ಅಲ್ಲವೇ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ಕುಮಾರಪರ್ವ ಪಕ್ಷದ ಕಾರ್ಯಕ್ರಮ. ಅದಕ್ಕೆ ಯಾರ್ಯರು ದೇಣಿಗೆ ಕೊಟ್ಟಿದ್ದಾರೆ ಅಂತ ಆತ್ಮ ಮುಟ್ಟುಕೊಳ್ಳಲಿ. ನನ್ನನ್ನ ಸಿಎಂ ಮಾಡಲು ಇವರೇನು ರಾಜ್ಯ ಪ್ರವಾಸ ಮಾಡಿದ್ದರೇ. ಸುಮ್ಮನೆ ಮಾತನಾಡೋದು ಬೇಡ ಎಂದು ಹೆಚ್.ಡಿಕೆ ತಿಳಿಸಿದರು.

Key words: mysore- GT devegowda- JDS-until I – politics- Former CM- HD Kumaraswamy