ಎಂಟೇ ತಿಂಗಳಲ್ಲಿ ನಾಲ್ಕನೆಯ ಮುದ್ರಣ ಕಂಡ ‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ’…

ಮೈಸೂರು,ಫೆಬ್ರವರಿ,3,2021(www.justkannada.in):  ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಅವರ ಲಲಿತ ಪ್ರಬಂಧಗಳ ಸಂಕಲನ ‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’ ಕೃತಿಯು ಎಂಟೇ ತಿಂಗಳಲ್ಲಿ ನಾಲ್ಕನೆಯ ಮುದ್ರಣ ಕಂಡಿದೆ.fourth-printing-eight-months-tusuve-kudiva-gandana-kodu-thayi

ಖ್ಯಾತ ಸರೋದ್ ವಾದಕರಾದ ಪಂ.ರಾಜೀವ ತಾರಾನಾಥ ‌ಅವರ ಮುನ್ನುಡಿ ಒಳಗೊಂಡ ಈ ಕೃತಿಯು ಕಳೆದ ವರ್ಷ ಜೂನ್ ತಿಂಗಳಲ್ಲಿ ಮೊದಲ ಮುದ್ರಣ ಕಂಡಿತು. ನಂತರ ಎರಡೇ ತಿಂಗಳಲ್ಲಿ ಎರಡನೇ ಮುದ್ರಣ, ಆರೇ ತಿಂಗಳಲ್ಲಿ ಮೂರನೇ ಮುದ್ರಣ ಕಂಡಿತು. ಸದ್ಯ ಎಂಟೇ ತಿಂಗಳಲ್ಲಿ ನಾಲ್ಕನೆಯ ಮುದ್ರಣ  ಕಂಡಿದೆ.fourth-printing-eight-months-tusuve-kudiva-gandana-kodu-thayi

28 ಪ್ರಬಂಧಗಳ ಈ ಸಂಕಲನದಲ್ಲಿ ಮದುವೆಯಿಂದ‌ ಮೊದಲರಾತ್ರಿಯವರೆಗೆ ಕೊನೆಗೆ ಅಂತ್ಯಕ್ರಿಯೆವರೆಗೆ ಇವೆ. ಹಿರಿಯ ಕವಿ ಚನ್ನವೀರ ಕಣವಿ, ಹಿರಿಯ ಲೇಖಕರಾದ ಸಿಪಿಕೆ, ಮಲ್ಲಿಕಾರ್ಜುನ ಮೊರಬದ, ವಿರ್ಮಶಕ ಎಸ್.ಆರ್.ವಿಜಯಶಂಕರ ಮೊದಲಾದವರ ಅಭಿಪ್ರಾಯಗಳಿವೆ.  ಆಸಕ್ತರು ಮೊ: 9880105526 ಸಂಪರ್ಕಿಸಬಹುದು.

Key words: Fourth- printing eight months’- Tusuve kudiva gandana kodu thayi