Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕೊಟ್ಟ ಭರವಸೆ ಈಡೇರಿಸದಿದ್ದರೇ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ- ಮಾಜಿ ಸಿಎಂ ಸಿದ‍್ಧರಾಮಯ್ಯ

ಕೊಟ್ಟ ಭರವಸೆ ಈಡೇರಿಸದಿದ್ದರೇ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ- ಮಾಜಿ ಸಿಎಂ ಸಿದ‍್ಧರಾಮಯ್ಯ

ಮೈಸೂರು,ಮಾರ್ಚ್,29,2023(www.justkannada.in):  ನಾವು ಕೊಟ್ಟ ಭರವಸೆ ಈಡೇರಿಸದಿದ್ದರೇ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ ಎಂದು  ಮಾಜಿ ಸಿಎಂ ಸಿದ‍್ಧರಾಮಯ್ಯ ಹೇಳಿದರು.

ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಬಿಳುಗುಲಿ ಗ್ರಾಮದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಬಾದಾಮಿ ಕ್ಷೇತ್ರ ದೂರವಾಗಿದ್ದರಿಂದ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಅಳೆದು ತೂಗಿ ಹೈಕಮಾಂಡ್ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದೆ. ‘ ವರುಣಾದಲ್ಲಿ ನಾನು ಮತಯಾಚನೆಗೆ ಬರಲ್ಲ. ಯತೀಂದ್ರ ಸಿದ್ಧರಾಮಯ್ಯ ಬರಲಿದ್ದಾರೆ. ಹೈಕಮಾಂಡ್ ನಿರ್ಧರಿಸಿದ ಮೇಲೆ ಯತೀಂದ್ರ ಸ್ವಾಗತಿಸಿದ್ದಾರೆ. ನಾನು ರಾಝ್ಯ ಸುತ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದರು.

ಇದೇ ವೇಳೆ ಬಿಜೆಪಿ ಸರ್ಕಾರ ಮತ್ತು ನಾಯಕರಿಗೆ ಶಾಪ ಹಾಕಿದ ಸಿದ್ಧರಾಮಯ್ಯ,  ಇವರ ಮನೆ ಹಾಳಾಗ ಬಡವರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ನಾವು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆಗಳನ್ನ ಕಟ್ಟಿಸಿಕೊಟ್ಟಿದ್ದವು. ನಾವು ಮತ್ತೆ ಅಧಿಕಾರಕ್ಕೆ ಬಂದರೇ 20ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಬೊಮ್ಮಾಯಿ ಮಾತೆತ್ತಿದ್ದರೇ ಧರ್ಮರಾಯನ ತರ  ಮಾತನಾಡುತ್ತಾರೆ. ರಾಜ್ಯದಲ್ಲಿ 40 ಪರ್ಸೆಂಟ್ ಬೆಂಗಳೂರಿಲ್ಲಿ 50ಪರ್ಸೆಂಟ್ ಇದೆ. 40 ಪರ್ಸೆಂಟ್ ಸರ್ಕಾರವೆಂದು ಹೇಳಿದರೇ ದಾಖಲೆ ಕೇಳುತ್ತಾರೆ. ಆಗಾದರೇ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿದ್ದೇಕೆ..? ಪೊಲೀಸ್ ನೇಮಕಾತಿ ಬಿಎಸ್ ವೈ ಮಗನ ಮನೆಯಲ್ಲೇ ನಡೆದಿದೆ. ಒಂದೊಂದು ಹುದ್ದೆಗೆ 50 ರಿಂದ 80ಲಕ್ಷ ಡಿಮ್ಯಾಂಡ ಮಾಡಿದ್ದಾರೆ.  ನನ್ನ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನ ನೋಡೆ ಇಲ್ಲ ಎಂದು ಕಿಡಿಕಾರಿದರು.

Key words: mysore-varuna-former cm-siddaramaiah