ಮೈಸೂರು ಜಿಲ್ಲೆಯಲ್ಲಿ 25,59,855 ಮತದಾರರು: ಚುನಾವಣಾ ಅಕ್ರಮ ನಡೆದರೆ ಜನರು ಮಾಹಿತಿ ನೀಡಿ-ಡಿಸಿ ಕೆ.ವಿ ರಾಜೇಂದ್ರ  ಮನವಿ.

ಮೈಸೂರು,ಮಾರ್ಚ್,29,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಈ ನಡುವೆ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಜಿಲ್ಲೆಯ ಚುನಾವಣೆ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಒಟ್ಟು 25,59,855 ಮತದಾರರಿದ್ದಾರೆ. ಈ ಪೈಕಿ 12,72, 155 ಪುರುಷ ಮತದಾರರಿದ್ದಾರೆ. 12,87,502 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ  ಒಟ್ಟು 2905 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗುತ್ತಿದೆ.  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ  337 ಮತಗಟ್ಟೆಗಳನ್ನ ಸ್ಥಾಪನೆ  ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಗೆಯೇ ಮೈಸೂರು ಜಿಲ್ಲೆಯಲ್ಲಿ ಚುನಾವಣೆ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದೇವೆ.  ಚುನಾವಣೆ ವೇಳೆ ಅಕ್ರಮ  ನಡೆದರೆ ಜನರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಮನವಿ ಮಾಡಿದರು.

Key words: 25,59,855 voters – Mysore- district-DC -KV Rajendra