ಡಿಕೆ ಶಿವಕುಮಾರ್ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಿಯೋಗ.

ಬೆಂಗಳೂರು,ಮಾರ್ಚ್,29,2023(www.justkannada.in):  ಕಲಾವಿದರಿಗೆ ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ದ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಮಂಡ್ಯ ಜಿಲ್ಲೆ ಶ್ರಿರಂಗಪಟ್ಟಣದಲ್ಲಿ  ಪ್ರಜಾಧ್ವನಿಯಾತ್ರೆ ವೇಳೆ ಡಿ.ಕೆ ಶಿವಕುಮಾರ್  ಕಲಾವಿದರಿಗೆ ಹಭಣ ಎಸೆದಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು. ಈ ಸಂಬಂಧ ಬಿಜೆಪಿ ಎಂಎಲ್ ಸಿ ರವಿಕುಮಾರ್  ನೇತೃತ್ವದ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ  ದೂರು ನೀಡಿದೆ.

ಹಾಗೆಯೇ  ಸಿಎಂ  ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಸ್ ಡಿಪಿಐ  ಮುಖಂಡರೊಬ್ಬರ ವಿರುದ್ಧವೂ  ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ ಎನ್ನಲಾಗುತ್ತಿದೆ.

Key words: BJP-delegation – complaint- against -DK Shivakumar – State Election Commission.