ತಲಕಾಡಿನಲ್ಲಿ ಅಪರೂಪದ ದಾಖಲೆ ಪ್ರದರ್ಶನ: ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ‌ಕುಮಾರ್

ಮೈಸೂರು,ಫೆಬ್ರವರಿ,2,2022(www.justkannada.in):  ಪ್ರಾಚ್ಯವಸ್ತು ಇಲಾಖೆ ಹಾಗೂ ಪತ್ರಗಾರ ಇಲಾಖೆಯವರು ತಲಕಾಡಿನ ಭೂ ಉತ್ಖನ ಹಾಗೂ ಅದರ  ಬಗ್ಗೆ ಅಪರೂಪದ ದಾಖಲೆಗಳ ಪ್ರದರ್ಶನ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ತಲಕಾಡಿನ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಮೈಸೂರು ವಿವಿ, ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗ ಹಾಗೂ ಶ್ರವಣಬೆಳಗೊಳದ ದಿಗಂಬರ ಜೈನ ಮಠ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ತಲಕಾಡಿನ ಗಂಗರು ಮತ್ತು ಚಾವುಂಡರಾಯ ಎಂಬ ವಿಷಯದ ಬಗ್ಗೆ ನಡೆದ ಎರಡು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಇದೊಂದು ಅರ್ಥ ಪೂರ್ಣ ಕಾರ್ಯಕ್ರಮ. ‘ತಲಕಾಡು ಗಂಗ ಅರಸರ ರಾಜಧಾನಿಯಾಗಿ ಮೆರೆದಿತ್ತು. ಅತ್ಯಂತ ಮಹತ್ತರವಾದ ವೈಭವೋಪೇತವಾಗಿ ರಾಜಧಾನಿಯಾಗಿ ಇದ್ದ ಜಾಗದಲ್ಲಿ ಈ ಸಮಾರಂಭ ನಡೆಸುತ್ತಿರುವುದು ಸಂತಸ ಉಂಟು ಮಾಡಿದೆ ಎಂದರು.

ಕದಂಬರು ಮತ್ತು ಗಂಗರು ಕನ್ನಡಿಗ ಅರಸರು. ಕರ್ನಾಟಕದಲ್ಲಿ ಕನ್ನಡಿಗರ ರಾಜ್ಯಸ್ಥಾಪನೆ ಮಾಡಿದ ಮೊದಲಿಗರಲ್ಲಿ `ಗಂಗರೂ ಇದ್ದಾರೆನ್ನುವುದು ಹೆಮ್ಮೆಯ ವಿಷಯ. ಗಂಗರ ಮನೆತನ ಒಂದು ಸಾವಿರ ವರ್ಷಗಳಷ್ಟು ಸುದೀರ್ಘಕಾಲ ನಾಡನ್ನು ಆಳಿದವರು. ಗಂಗದೊರೆಗಳು ಸಾಹಸಿಗಳು ಪರಾಕ್ರಮಿಗಳು ಆಗಿದ್ದರು. ಕೊಡಗು ಜಿಲ್ಲೆಯಿಂದ ಉತ್ತರ ಆರ್ಕಾಟ್ ಜಿಲ್ಲೆಯವರೆಗೆ ಹಾಗೂ ಬಳ್ಳಾರಿ ಜಿಲ್ಲೆಯಿಂದ ತಮಿಳುನಾಡಿನ ಸೇಲಂ ಕೊಯಂಬತ್ತೂರುವರೆಗಿನ ವಿಸ್ತಾರವಾದ ಪ್ರದೇಶದಲ್ಲಿ ಗಂಗ ಮನೆತನದ ಆಳ್ವಿಕೆಯ ಕಾಲಕ್ಕೆ ಇರುವರೆಗಿನ ಹಾಕಿದ ಶಾಸನಗಳು ದೊರೆಯುತ್ತಿವೆ ಎಂದು ವಿವರಿಸಿದರು.

ತಲಕಾಡು ಗಂಗ ಮನೆತನದ ರಾಜಧಾನಿಯಾಗಿ ಐತಿಹಾಸಿಕ ಹಿನ್ನೆಲೆಯಿರುವಂತಹ ಒಂದು ಪ್ರದೇಶ. ಈ ಊರಲ್ಲಿ ಅನೇಕ ಸ್ಮಾರಕಗಳು, ಮರಳಿನಲ್ಲಿ ಹೂತು  ಹುದುಗಿ ಹೋಗಿದ್ದ ಚರಿತ್ರೆಯ ಸಂಗತಿಗಳನ್ನು ಪುರಾತತ್ವ ವಿಭಾಗದಿಂದ ಡಾ. ಕೃಷ್ಣಮೂರ್ತಿ ಹಾಗೂ ಎನ್.ಎಸ್. ರಂಗರಾಜು ಇವರೆಲ್ಲ ಸೇರಿ ಉತ್ಪನನ ಮಾಡಿ ಬೆಳಕಿಗೆ ತಂದಿದ್ದಾರೆ. ಈ ಎರಡು ದಿನಗಳ ವಿಚಾರ ಸಂಕಿರಣದಲ್ಲಿ  ವಿದ್ವಾಂಸರು ತಮ್ಮ ವಿದ್ವತ್ತೂರ್ಣ ವಿಚಾರಗಳನ್ನು ಸಂಕಿರಣದಲ್ಲಿ ಮಂಡಿಸಲಿದ್ದಾರೆ ಎಂದರು.

ಅಂತೆಯೇ ಗಂಗರ ಪ್ರಧಾನಿಯಾಗಿದ್ದ ಚಾವುಂಡರಾಯ ಮೊದಲು ತಲಕಾಡಿನಲ್ಲಿ ಇದ್ದವನು ಅನಂತರ ಜೈನಕಾಶಿ ಎನಿಸಿದ ಶ್ರವಣಬೆಳಗೊಳಕ್ಕೆ ತಲಕಾಡಿನಿಂದ ಹೋಗುತ್ತಾನೆ. ಅಲ್ಲಿಯೇ ಬಾಹುಬಲಿಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾನೆ. 58 ಅಡಿಗಳಷ್ಟು ಎತ್ತರದ ಆ ಮೂರ್ತಿ ವಿಶ್ವಕ್ಕೆ ಶಾಂತಿ ಸಂದೇಶವನ್ನು, ಅಹಿಂಸೆಯೇ ಪರಮಧರ್ಮ ಎಂಬುದನ್ನು ಸಾರಿ ಹೇಳುತ್ತಿದೆ ಎಂದರು.

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜಿತ್ರೇಂದ್ರ ಕುಮಾರ , ಜೈನ್ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ.ವಿಜಯಕುಮಾರಿ ಎಸ್. ಕರಿಕಲ್ , ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮುರುಳಿಧರನ್ ,ತಲಕಾಡು ಗ್ರಾ.ಪಂ ಅಧ್ಯಕ್ಷ ಕೆಂಪಯ್ಯ ಸೇರಿದಂತೆ ಇತರು ಇದ್ದರು.

Key words: mysore university-VC- Prof. Hemanth Kumar

ENGLISH SUMMARY…

Rare documents exhibition at Talakad: UoM VC
Mysuru, February 2, 2022 (www.justkannada.in): “The Talakad land excavation and rare documents exhibition held by the Department of Archaeology, Museums and Heritage is a very meaningful program,” opined Prof. G. Hemanth Kumar, Vice-Chancellor, University of Mysore.
He participated in the two-day seminar on the topic, “Gangas of Talakad and Chauvndaraya,” organised by the University of Mysore, in association with the Department of Jainology and Prakrit and Digambara Jain Math, Shravanabelagola and the Department of Archaeology, Museums and Heritage.
“This is a very meaningful program. Talakad was once the capital city of Ganga kings. It has a rich history. It is very happy to see that the program is organised here,” he said.
Jitendra Kumar of Sri Kshetra Shravanabelagola, Prof. Vijayakumari S. Karikal, President, Department of Jainology and Prakrit, Sri Muralidharan, Principal, Government PU College, Talkad, gram panchayat president Kempaiah and others were present.
Keywords: Rare documents exhibition/ Talakad/ University of Mysore