ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿಗೆ ಸೀಟು ಮೀಸಲು : ಹೆಚ್ಚು ಪ್ರಚಾರಕ್ಕೆ ಮೈಸೂರು ವಿವಿ ಸಿಂಡಿಕೇಟ್ ನಿರ್ಧಾರ.

ಮೈಸೂರು, ಜೂನ್ ೩೦, ೨೦೨೧ (www.justkannada.in): ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ ಸೀಟು ‘ಮೀಸಲು’ ಇಟ್ಟಿರುವ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಕ್ರಾಫರ್ಡ್ ಭವನದ ಸಿಂಡಿಕೇಟ್ ಹಾಲ್ ಈ ಸಭೆ ನಡೆಯಿತು. ಈ ಬಗ್ಗೆ ಜಸ್ಟ್ ಕನ್ನಡ ಜತೆಗೆ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದಿಷ್ಟು..

jk

ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಇಚ್ಛಿಸುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕಳೆದ ಕೆಲ ವರ್ಷಗಳಿಂದಲೂ ಸೀಟು ಮೀಸಲಿರಿಸಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದ ಕಾರಣ ತೃತೀಯ ಲಿಂಗಿಗಳು ಇದರ ಪ್ರಯೋಜನ ಪಡೆಯಲು ವಿಫಲವಾಗುತ್ತಿದ್ದಾರೆ. ಆದ್ದರಿಂದ ‘ಸೀಟು ಮೀಸಲು’ ಕುರಿತು ಹೆಚ್ಚಿನ ಪ್ರಚಾರ ಮಾಡುವಂತೆ ಸಿಂಡಿಕೇಟ್ ಸದಸ್ಯೆ ಡಾ. ಚೈತ್ರ ನಾರಾಯಣ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಚರ್ಚಿಸಿದ ಸಿಂಡಿಕೇಟ್, ತೃತೀಯ ಲಿಂಗಿಗಳಿಗೆ ಸೀಟು ಮೀಸಲಿಟ್ಟಿರುವ ಬಗ್ಗೆ ಅಗತ್ಯ ಪ್ರಚಾರ ಕೈಗೊಂಡು ಯೋಜನೆ ಉದ್ದೇಶ ಕೈಗೂಡಲು ಸಹಕರಿಸುವಂತೆ ಸಲಹೆ ನೀಡಿದರು.

UoM Degree students admission: Fee payment last date extended by 15 days

ಈ ನಿಟ್ಟಿನಲ್ಲಿ ವಿವಿ, ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಈ ಸೀಟು ಮೀಸಲು ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ತೀರ್ಮಾನ ತೆಗೆದುಕೊಂಡಿತು ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮುಂದಿನ ವರ್ಷದ ಅಡ್ಮಿಷನ್ ಪ್ರಾಸ್ಪೆಕ್ಟಸ್ ಅರ್ಜಿ ನಮೂನೆ,ಮೀಸಲಾತಿಯನ್ನ ತೃತೀಯ ಲಿಂಗಿಗಳಿಗೆ ನಮೂದಿಸಲಾಗುತ್ತದೆ ಎಂದು ತಿಳಿಸಿದರು.

ENGLISH SUMMARY….

Reservation in Degree, PG seats for transgenders in UoM: Syndicate decision to spread news
Mysuru, June 30, 2021 (www.justkannada.in): A decision to publicize the reservation for transgenders in various degree and PG courses provided by the University of Mysore was taken today in the UoM syndicate meeting.
The meeting was held under the leadership of Prof. G. Hemanth Kumar, Vice-Chancellor, University of Mysore, at the Syndicate Hall in Crawford Hall. Speaking to Justkannada.in regarding this Prof. G. Hemanth Kumar said, “the University of Mysore is providing reservation of seats in various degree and PG courses for transgenders who are willing to pursue education. Due to lack of proper publicity, it has not reached them and hence they are failing to utilize the benefit. Hence, we have decided to undertake publicity of the reservation of seats to transgenders. A proposal in this regard was submitted by Dr. Chaitra Narayan, which was discussed in today’s syndicate meeting. Efforts will be made to create awareness about the reservation during the enrolment of students to the university.”
Keywords: Prof. G. Hemanth Kumar/ University of Mysore/ reservation/ degree/ PG courses/ transgenders

key words : mysore-university-UOM-syndicate-meeting-transgender-seat-reservation-degree