JK ಫಲಶೃತಿ : ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಸಿಂಧು ಸುರೇಶ್ ನೇಮಕ ರದ್ದುಗೊಳಿಸಿದ ಸರಕಾರ.

 

ಮೈಸೂರು, ಮಾ.17, 2020 : (www.justkannada.in news) : ಮೈಸೂರು ವಿವಿ ಸಿಂಡಿಕೇಟ್ ಗೆ ಸದಸ್ಯರಾಗಿ ನೇಮಕಗೊಂಡಿದ್ದ ಸಿಂಧುಸುರೇಶ್ ಅವರ ನೇಮಕವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.

mysore-university-syndicate-member-nomination-irregular-sindhu-suresh-cancelled

ಈ ಸಂಬಂಧ ಮಾ. 9 ರಂದು ಸರಕಾರದ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯಪಾಲರ ಸೂಚನೆ ಮೇರೆಗೆ ಸಿಂಧು ಸುರೇಶ್ ನೇಮಕ ರದ್ದುಪಡಿಸಿ, ಆ ಸ್ಥಳಕ್ಕೆ ಮೈಸೂರಿನ ವಿಜಯನಗರದ ನಿವಾಸಿ ವೈ.ಕೆ.ಪವಿತ್ರ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಈ ಆದೇಶದ ಅನ್ವಯ ಮಾ. 16 ರಂದು ಮೈಸೂರು ವಿವಿ ಕುಲಸಚಿವರು ವೈ.ಕೆ.ಪವಿತ್ರ ನೇಮಕ ಸಂಬಂಧ ಆದೇಶ ಹೊರಡಿಸಿದ್ದಾರೆ.

mysore-university-syndicate-member-nomination-irregular-sindhu-suresh-cancelled

ಏನಿದು ಘಟನೆ :

ವಿಶ್ವವಿದ್ಯಾನಿಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವ ವೇಳೆ ವಿಶ್ವವಿದ್ಯಾನಿಲಯದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ನೇಮಕ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಡಾಟ್ ಇನ್ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಆದರೆ ಈ ನೇಮಕಾತಿ ಮಾಡುವ ವೇಳೆ ‘ ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆ 2000’ ಇದನ್ನು ಸಂಪೂರ್ಣ ಕಡೆಗಣಿಸಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಅದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಧಾನಕ್ಕೆ ಎಡೆಮಾಡಿತ್ತು.

mysore-university-syndicate-member-nomination-irregular-sindhu-suresh-cancelled

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವ ವೇಳೆಯಲ್ಲೂ ಈ ಉಲ್ಲಂಘನೆ ನಡೆದಿದೆ. ‘ ಕರ್ನಾಟಕ ಯುನಿವರ್ಸಿಟಿ ಆ್ಯಕ್ಟ್ 2000’ ಇದರ ಪ್ರಕಾರ, ಒಂದು ಬಾರಿ ಸದಸ್ಯರಾಗಿ ನೇಮಕಗೊಂಡವರನ್ನು ಮತ್ತೆ ಇನ್ನೊಂದು ಅವಧಿಯಲ್ಲಿ ಅದೇ ಸ್ಥಾನಕ್ಕೆ ನೇಮಕ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.

ಮೈಸೂರು ವಿವಿಯ ಸಿಂಡಿಕೇಟ್ ಗೆ ವಿವಿಧ ಮೀಸಲಿನಡಿ ಒಟ್ಟು ಆರು ಜನರನ್ನು ನೇಮಕ ಮಾಡಲಾಗಿದೆ. ಇವರುಗಳೆಂದರೆ, ಚಾಮರಾಜನಗರದ ಪ್ರದೀಪ್ ಕುಮಾರ್ ದೀಕ್ಷಿತ್ (ಸಾಮಾನ್ಯ), ಮಂಡ್ಯದ ಪ್ರೊ.ದೊಡ್ಡಚಾರಿ (ಸಾಮಾನ್ಯ), ಮೈಸೂರಿನ ಸಿಂಧು ಸುರೇಶ್ (ಮಹಿಳೆ) ಮಂಡ್ಯ ಜಿಲ್ಲೆಯ ಡಾ.ಈ.ಸಿ.ನಿಂಗರಾಜು (ಹಿಂದುಳಿದ ವರ್ಗ), ಹಾಸನ ಜಿಲ್ಲೆಯ ಡಾ.ದಾಮೋಧರ (ಪರಿಶಿಷ್ಠ ಪಂಗಡ), ಬೆಂಗಳೂರಿನ ಡಾ.ಸಯ್ಯದ್ ಕಾಝು ಮೊಹೀದ್ದಿನ್ (ಅಲ್ಪಸಂಖ್ಯಾತ).

ಈ ಪೈಕಿ ಮೈಸೂರಿನ ಸಿಂಧು ಸುರೇಶ್ ನೇಮಕ ವಿವಾದಕ್ಕೆ ಕಾರಣವಾಗಿತ್ತು. ಇವರು ಈ ಹಿಂದೆ 2002 ರಲ್ಲಿ ಇದೇ ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಈಗ ಮತ್ತೆ 17 ವರ್ಷಗಳ ಬಳಿಕ 2019 ರಲ್ಲಿ ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ಮರು ನಾಮಕರಣಗೊಂಡಿರುವುದು ನಿಯಮ ಬಾಹಿರ. ಇದು ‘ ಕರ್ನಾಟಕ ಯೂನಿವರ್ಸಿಟಿ ಆ್ಯಕ್ಟ್ 2000’ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ತಜ್ಞರ ಅಭಿಪ್ರಾಯವನ್ನು ಉಲ್ಲೇಖಿಸಿ ಜಸ್ಟ್ ಕನ್ನಡ ಡಾಟ್ ಇನ್ ವರದಿ ಮಾಡಿತ್ತು.

ಇದೀಗ, ಕಡೆಗೂ ಎಚ್ಚೆತ್ತುಕೊಂಡ ರಾಜ್ಯ ಸರಕಾರ ಮಾಡಿದ್ದ ಎಡವಟ್ಟು ಸರಿಪಡಿಸಿಕೊಂಡು ಸಿಂಧು ಸುರೇಶ್ ಅವರ ನೇಮಕ ರದ್ದುಗೊಳಿಸಿದೆ.

key words : mysore-university-syndicate-member-nomination-irregular-sindhu-suresh-cancelled

karnataka state governament violates ‘ karnataka univrrsity act 2000 ‘ while nominating the syndicate members.