ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್ ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ –ಸಿದ್ಧರಾಮಯ್ಯಗೆ  ಸವಾಲು ಹಾಕಿದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ರಾಮನಗರ,ಸೆ,24,2019(www.justkannada.in): ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ನಡುವಿನ ವಾಕ್ಸಮರ ಮುಂದುವರೆದಿದ್ದು,  ಸಿದ್ಧರಾಮಯ್ಯ ಅವರಿಗೆ ಶಕ್ತಿ ಇದ್ದರೇ ಕಾಂಗ್ರೆಸ್ ನಿಂದ ಹೊರ ಬಂದು ಪಕ್ಷ ಕಟ್ಟು ಬೆಳೆಸಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ. ರಾಮನಗರ ಜಿಲ್ಲೆಯ ಜನ ನನ್ನನ್ನ ಬೆಳೆಸಿದ್ದಾರೆ. ಸಿದ್ದರಾಮಯ್ಯನವರಿಂದ ನಾನೇನು ಬೆಳೆದಿಲ್ಲ. ದೇವೇಗೌಡರು ಸಿದ್ದರಾಮಯ್ಯ ನವರಂತಹ ಗಿಣಿಗಳನ್ನ ಸಾಕಷ್ಟು ಬೆಳೆಸಿದ್ದಾರೆ. ಆದರೆ ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ ಎಂದು ಗುಡುಗಿದರು.

ನಾನು ಸಿದ್ದರಾಮಯ್ಯ ರಿಂದ ಸಿಎಂ ಆಗಲಿಲ್ಲ…

ನಾನು ಸಿದ್ದರಾಮಯ್ಯ ರಿಂದ ಸಿಎಂ ಆಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಆಗಿದ್ದೆ. ಅದನ್ನ ಸಿದ್ದರಾಮಯ್ಯ ನವರು ಸಹಿಸಲಿಲ್ಲ. ಹಾಗಾಗಿ ಈ ಸರ್ಕಾರವನ್ನ ಕೆಡವಲು ಅವರೇ ಮುಂದಾದರು. ನಾವಾದರೂ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಬೆಳೆಸಿದ್ದೇವೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನ ಧಾರೆಎರೆಸಿಕೊಂಡು ಬೆಳೆದವರು. ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್ ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ. ಯಾರದ್ದೋ ದುಡ್ಡು, ಯಾರದ್ದೋ ಜನರೆದುರು ಬೆಳೆದು ಬಂದಿರುವವರು ಸಿದ್ದರಾಮಯ್ಯ  ಎಂದು ಚಾಲೆಂಜ್  ಹಾಕಿದರು.

ದೇವೇಗೌಡರು ಅವರದ್ದು ಒಡನಾಟ ಇತ್ತು. ದೇವೇಗೌಡರೇ ಅವರನ್ನ ಒಂದು ಶಕ್ತಿಯಾಗಿ ಬೆಳೆಸಿದ್ರು. ಸಿದ್ದರಾಮಯ್ಯ ನವರ ಕಾರ್ಯಕ್ರಮಕ್ಕೆ ನನ್ನ ಜನ, ನನ್ನ ಹಣವನ್ನ ಖರ್ಚು ಮಾಡಿದ್ದೇನೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ ಬ್ಯಾನರ್ ನಲ್ಲಿ ಫೋಟೋ ಹಾಕಿಲ್ಲ ಅಂತಾ ಮುನಿಸಿಕೊಂಡು ಮನೆಲೀ ಕುಳಿತಿದ್ದರು ಅವರು ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

Key words: Congress –siddaramaiah- build –party-Former CM -HD Kumaraswamy- challenges