ಅತೀ ವೇಗದ ವಾಹನ ಚಾಲನೆ: ಶೇನ್​ ವಾರ್ನ್​ ಭಾರಿ ದಂಡ !

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ಅತಿವೇಗದಿಂದ ವಾಹನ ಚಲಾಯಿಸಿದ್ದಕ್ಕೆ ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್​ ಅವರು ಭಾರಿ ದಂಡ ತೆತ್ತಿದ್ದಾರೆ.

ವಾರ್ನ್‌ಗೆ 12 ತಿಂಗಳು ಕಾಲ ಡ್ರೈವಿಂಗ್ ಮಾಡದಂತೆ ಇಲ್ಲಿನ ಪೊಲೀಸರು ನಿಷೇಧ ಹೇರಿದ್ದಾರೆ.  ಕಳೆದ ಎರಡು ವರ್ಷಗಳಲ್ಲಿ 6 ಬಾರಿ ಇದೇ ರೀತಿ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಾರೆ.

50 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್​ ವಾರ್ನ್​, ವಿಂಬಲ್ಡನ್​ನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ತಮ್ಮ ತಪ್ಪನ್ನು ಕೋರ್ಟಿನ ಕಟಕಟೆಯಲ್ಲಿ ನಿಂತು ಒಪ್ಪಿಕೊಂಡಿದ್ದಾರೆ.