ಉನ್ನತ  ಶಿಕ್ಷಣದಲ್ಲಿ ಸಮಗ್ರ ಸುಧಾರಣೆ -ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್

ಮೈಸೂರು,ಡಿಸೆಂಬರ್,3,2022(www.justkannada.in):  ಸುಶಾಸನ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ತಂತ್ರಜ್ಞಾನದ ಅಳವಡಿಕೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ನಡೆದ ಉನ್ನತ ಶಿಕ್ಷಣದಲ್ಲಿ ಸುಶಾಸನ ಪರಿಕಲ್ಪನೆ ಮತ್ತು ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಸುಶಾಸನದ ಮಾಸವನ್ನ ರಾಜ್ಯದ ಪ್ರತಿ ಶಿಕ್ಷಣ ಸಂಸ್ಥೆ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ  ಆಚರಣೆ ಮಾಡುವುದು ಇದರ ಉದ್ದೇಶವಾಗಿದ್ದು, ಈ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಇಂದು  ನಮ್ಮೆಲ್ಲರ ಅಭಿಮಾನದ ವಿಶ್ವವಿದ್ಯಾಲಯದಲ್ಲಿ ಸುಶಾಸನದ ಮಾಸ ನಡೆಯುತ್ತಿರುವುದು ನಮ್ಮ ಹೆಮ್ಮೆ.‌ ಸುಶಾಸನ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ತಂತ್ರಜ್ಞಾನದ ಅಳವಡಿಕೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಸುಶಾಸನ ಆಗಬೇಕೆಂದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಹೀಗಾಗಿ ಎನ್‌ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುತ್ತೇವೆ ಎಂದರು.

ನಾಡು ಮತ್ತು ವ್ಯಕ್ತಿಗಳನ್ನ ಸದೃಡ ಮಾಡುವಲ್ಲಿ ಈ ಕಾರ್ಯಕ್ರಮ ಉಪಯುಕ್ತವಾಗಿದ್ದು,  ತಾವೆಲ್ಲರೂ ಉತ್ತಮ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಕೌಶಲ್ಯ ಕಲಿಕೆ ಮುಖ್ಯ. ಹೀಗಾಗಿ ಕೌಶಲ್ಯಾಭಿವೃದ್ಧಿ ಮೂಲಕ ಕೌಶಲ್ಯ ಕಲಿಕೆಗೆ  ಮತ್ತಷ್ಟು ಬಲ ತುಂಬುವಲ್ಲಿ ನಮ್ಮ ಉನ್ನತ ಶಿಕ್ಷಣ ಸದಾ ಮುಂಚೂಣಿಯಲ್ಲಿದೆ ಎಂದರು.

ಮೊದಲು ನಮ್ಮ ಮನೋಭಾವಗಳು , ಸದೃಡವಾಗಬೇಕು,ಆರೋಗ್ಯವಾಗಬೇಕು ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ, ಹಾಗೂ  ಗುಣಮಟ್ಟತೆ ಇರಬೇಕು. ಉತ್ತಮ ಆಡಳಿತದಲ್ಲಿ ತಮ್ಮ  ಜವಾಬ್ದಾರಿಯನ್ನು ಅರಿತು ವಿ.ವಿಯ ಕುಲಪತಿಗಳು, ಪ್ರಾಧ್ಯಾಪಕರು, ಅಧ್ಯಕ್ಷರು , ಜವಾಬ್ದಾರಿ ವಹಿಸಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಎಲ್ಲರ  ಜ್ಞಾನರ್ಜನೆ ಇರುವುದು ಶಿಕ್ಷಣದಿಂದ ಮಾತ್ರ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಾರಂಭಿಸಿದ ಈ ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ಇಂದು ನಡೆಯುತ್ತಿರುವುದು ಅದರಲ್ಲೂ  ಈ ವಿ.ವಿಗೆ ಮೊದಲ ಕುಲಪತಿ ನನ್ನ ಮಲೇಶ್ವರಂನ ಕ್ಷೇತ್ರದ   ನಂಜುಂಡಯ್ಯರವರು ಎಂದು ಸ್ಮರಿಸಿದರು.

ಕುವೆಂಪುರವರು  ಮಾನಸಗಂಗೋತ್ರಿ ಎಂಬ ಹೆಸರನ್ನು ಇಟ್ಟಿದ್ದು  ಮಾನಸದಂತೆ ಜ್ಞಾನವೂ ನಿತ್ಯ ನೂತನವಾಗಿ ಅರಿಯುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿರುವುದು ಪ್ರತಿ ವಿದ್ಯಾರ್ಥಿಗಳ ಭ್ಯಾಗ ಈ ಮೂಲಕ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು ರವರು ಈ ವಿ.ವಿಯನ್ನು ಕಟ್ಟಿಬೆಳೆಸಿದ್ದಾರೆ ಎಂದರು.

ದೇಶದಲ್ಲಿ ನ್ಯಾಕ್ ಮಾನ್ಯತೆ  ಪಡೆದ ಮೊದಲ ವಿ.ವಿ ಇದ್ದಾಗಿದ್ದು, ಈ ಮೈಸೂರು ಜ್ಞಾನರ್ಜನೆಗೆ  ಒಂದು ಉತ್ತಮ  ಸ್ಥಳ ಇಲ್ಲಿ ವೈಯಕ್ತಿಕ ಪತ್ರಿಷ್ಟೆಗಳನ್ನ ಬಿಟ್ಟು ಎಲ್ಲರೂ ಭರವಸೆಯಿಂದ ಕೆಲಸ ಮಾಡೋಣ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾವು ಪ್ರತಿದಿನ ಒಳ್ಳೆಯ ಕೆಲಸ ಮಾಡುವಲ್ಲಿ , ನಮ್ಮ ಸರ್ಕಾರ ಪಾರದರ್ಶಕವಾಗಿ ಶ್ರಮಿಸುತ್ತಿದೆ. ಇಂದು ಪ್ರಕೃತಿಯ ವೈಪರೀತ್ಯದ ಸವಾಲಿನ ಕೆಲಸಗಳನ್ನು ಮಾಡಬೇಕಾಗಿದೆ.  ಇದರ ಮಧ್ಯೆ ಒಳ್ಳೆಯ ಕೆಲಸಗಳನ್ನ ಮಾಡಬೇಕಾಗಿದೆ ನಾವು ಸಮಯದ ಸದುಪಯೋಗ ಮಾಡಿ ನಾವು ಪ್ರತಿದಿನ ಕಲಿಯುವ ಪ್ರಯತ್ನ ಮಾಡಬೇಕು ಎಂದು ಅಶ್ವಥ್ ನಾರಾಯಣ್ ಕಿವಿಮಾತು ಹೇಳಿದರು.

ನಾವು ಪ್ರಪಂಚದ ಮಧ್ಯ ಸ್ಪರ್ಧೆ ಮಾಡುತ್ತಿದ್ದು ,ಜಾಗತೀಕರಣ, ನಡುವೆ ಸರ್ಧೆ ಮಾಡುತ್ತಿದೆ ಇದನೆಲ್ಲ ಅರಿತು ಜ್ಞಾನ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಸಮಾಜದ ಗುಣಮಟ್ಟ ನಮ್ಮ ಗುಣಮಟ್ಟದ ಸುಧಾರಣೆಯಿಂದ ಆಗುತ್ತಿದ್ದು, ನಮ್ಮ ಸರ್ಕಾರ ಹಲವಾರು ಸುಧಾರಣೆಗಳನ್ನು ಮಾಡುವಲ್ಲಿ ಶ್ರಮಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಇದನ್ನ 22 ವರ್ಷದ ನಂತರ ಈ ಕಾಯ್ದೆಯನ್ನು ಉನ್ನತ ಶಿಕ್ಷಣದಲ್ಲಿ ತರಲಾಗಿದೆ ಎಂದರು‌.

ಜಿಲ್ಲಾವಾರು 9 ವಿ.ವಿಗಳು

ಹೊಸದಾಗಿ 15 ವಿ‌.ವಿ ಗಳನ್ನು ಪ್ರಾರಂಭಿಸಲಾಗುತ್ತಿದ್ದು ಈ ಮೂಲಕ  ಉನ್ನತ ಶಿಕ್ಷಣದಲ್ಲಿ ಮಹತ್ವ ಪೂರ್ಣ ಬದಲಾವಣೆ ಆಗುತ್ತಿದೆ.  ಈ ಮಾಸ ಅರ್ಥಪೂರ್ಣ ಆಚರಣೆಯಾಗಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಎಲ್ , ನಾಗೇಂದ್ರ,  ಚಾಣಕ್ಯ ವಿ.ವಿ ಕುಲಪತಿ ಪ್ರೊ. ಯಶವಂತ ಡೊಂಗ್ರೆ, ವಿಶ್ರಾಂತ ಕುಲಪತಿ ಪ್ರೊ‌.ಎಸ್.ಎನ್ ಹೆಗ್ಡೆ,  ಮೈಸೂರು ವಿ.ವಿ ಕುಲಪತಿ ಪ್ರೊ.ಹೆಚ್. ರಾಜಶೇಖರ್,ಕುಲಸಚಿವೆ ವಿ‌.ಆರ್ ಶೈಲಜಾ, ಕೆ.ಎಸ್.ಒ.ಯು ಕುಲಪತಿ ಶರಣಪ್ಪ ಅಲಸೆ,  ಹಾಗೂ ಮತ್ತಿತರರು ಉಪಸ್ಥಿತರಿದ್ದರು‌.

Key words: mysore university- Minister -Dr. C.N. Aswath Narayan- Higher Education